<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ

Banner Ad
ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ

ಬೆಂಗಳೂರು :- ರಾಜ್ಯದ ಜನತೆಗೆ ಹಾಲಿನ ದರ ಏರಿಕೆಯ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜರಿಗೆ ಬರಲಿವೆ.

ಹೊಸ ದರದ ಪ್ರಕಾರ, ಅರ್ಧ ಲೀಟರ್ ಮೊಸರಿನ ಬೆಲೆ 28 ರೂ.ನಿಂದ ೩೪ ರೂ.ಗೆ ಏರಿಕೆಯಾ ಗಿದ್ದರೆ, ಒಂದು ಲೀಟರ್ ಮೊಸರಿನ ದರ 54ರೂ. ನಿಂದ 68ರೂ.ಗೆ ಹೆಚ್ಚಳವಾಗಿದೆ. ಅಂದರೆ, ಅರ್ಧ ಲೀಟರ್ ಮೊಸರಿಗೆ 6ರೂ. ಹಾಗೂ ಒಂದು ಲೀಟರ್ ಮೊಸರಿಗೆ 14 ರೂ. ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.

ಇದಲ್ಲದೆ ವಿವಿಧ ಮಾದರಿಯ ಹಾಲಿನ ದರದಲ್ಲಿಯೂ ಏರಿಕೆ ಮಾಡಲಾಗಿದೆ. ಟೋನ್ಡ್ ಹಾಲಿನ ಬೆಲೆ 46 ರೂ. ನಿಂದ 54ರೂ. ಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ 47ರೂ. ನಿಂದ 56ರೂ. ಗೆ ಹೆಚ್ಚಿಸಲಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ 50 ರೂ.ನಿಂದ 58 ರೂ.ಗೆ ಏರಿಕೆಯಾಗಿದ್ದರೆ, ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ದರ ತಲಾ 52 ರೂ.ನಿಂದ 64 ರೂ.ಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂ.ನಿಂದ ೬೫ರೂ. ಗೆ ಏರಿಕೆಯಾಗಿದೆ.

ಒಟ್ಟಾರೆ ರಾಜ್ಯ ಸರ್ಕಾರ ಸಾಮಾನ್ಯ ಗ್ರಾಹಕರ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ. ಮುಂಬರುವ ಚುನಾವಣೆ ಸಂದರ್ಭದಲ್ಲಿ ಮತದಾರ ಬಂಧುಗಳು ಈ ಬೆಲೆ ಏರಿಕೆ ಬಗ್ಗೆ ಸರ್ಕಾರಕ್ಕೆ ಬುದ್ದಿ ಕಲಿಸುವುದು ಖಚಿತ ಎಂಬ ಅಭಿಪ್ರಾಯಗಳು ಸಹ ಕೇಳಿಬರುತ್ತಿದೆ. ಈಗಲೂ ಕಾಲ ಮಿಂಚಿಲ್ಲ ರಾಜ್ಯ ಸರ್ಕಾರ ಹೆಚ್ಚುವರಿ ದರವನ್ನು ತಾನೇ ಭರಿಸಬೇಕು. ಆಗ ಜನಸಾಮಾನ್ಯರ ಬದುಕು ನಿರಾಳವಾಗುತ್ತದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *