<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಪ್ರಾಣಿ-ಪಕ್ಷಿಗಳಿಗೆ ತುರ್ತು ಆಹಾರ, ಜಲಮೂಲ ವ್ಯವಸ್ಥೆ ಮಾಡಲು ಮನವಿ

Banner Ad
ಪ್ರಾಣಿ-ಪಕ್ಷಿಗಳಿಗೆ ತುರ್ತು ಆಹಾರ, ಜಲಮೂಲ ವ್ಯವಸ್ಥೆ ಮಾಡಲು ಮನವಿ

ಶಿವಮೊಗ್ಗ :- ಜಿಲ್ಲೆಯಲ್ಲಿ ಒತ್ತುವರಿಯಾದ ಕೆರೆಗಳ ಸಂರಕ್ಷಣೆ, ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಪ್ರಾಣಿ-ಪಕ್ಷಿಗಳಿಗೆ ತುರ್ತು ಆಹಾರ ಮತ್ತು ಜಲಮೂಲ ವ್ಯವಸ್ಥೆ ಮಾಡುವಂತೆ ವ್ಯೂಮನ್ ರೈಟ್ಸ್ ಜಸ್ಟೀಸ್ ಕೌನ್ಸಿಲ್ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂತ ಪ್ರಸ್ತುತ ತೀವ್ರವಾಗಿರುವ ಬೇಸಿಗೆಯ ಬಿಸಿಲಿನ ಬೇಗೆಗೆ ನದಿ, ಹಳ್ಳ-ಕೊಳ್ಳಗಳು ಮತ್ತು ಕೆರೆಗಳು ಬತ್ತಿ ಹೋಗಿದ್ದು, ಮೂಕ ಜೀವಿಗಳು ಆಹಾರ ಮತ್ತು ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ನಮ್ಮ ಸಂಘಟನೆಯ ಪರವಾಗಿ ಈ ಕೆಳಗಿನ ತುರ್ತು ಬೇಡಿಕೆಗಳನ್ನು ಜರಿಗೊಳಿಸಲು ಒತ್ತಾಯಿಸಿದರು.

ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವು :

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ (ಅಣಥಿ ಐmಣ) ಕೆರೆಗಳು ಹಾಗೂ ವಿಶೇಷವಾಗಿ ಊರುಗಡೂರು, ಮಂಡ್ಲಿ, ಹರಕೆರೆ, ಸೋಮಿನಕೊಪ್ಪ, ಪುರದಾಳು, ಮತ್ತು ಅನುಪಿನಕಟ್ಟೆ, ಆಯ್ಕೆಳ ಭಾಗದ ಕೆರೆಗಳು ವ್ಯಾಪಕವಾಗಿ ಒತ್ತುವರಿಯಾಗಿವೆ. ಈ ಕೆರೆಗಳ ಜಗವನ್ನು ತಕ್ಷಣವೇ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಿ, ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸುವುದು: ಒಣಗುತ್ತಿರುವ ಜಿಲ್ಲೆಯ ಪ್ರಮುಖ ಕೆರೆಗಳಿಗೆ ಸಾಧ್ಯವಾದಷ್ಟು ಕಾಲುವೆಗಳ ಮೂಲಕ ಅಥವಾ ಟ್ಯಾಂಕರ್ ಮೂಲಕ ನೀರು ತುಂಬಿಸಿ ಪ್ರಾಣಿ-ಪಕ್ಷಿಗಳ ಜೀವ ಉಳಿಸಬೇಕು. ಜಲಮೂಲಗಳ ರಕ್ಷಣೆ ಜೀವವೈವಿಧ್ಯದ ಉಳಿವಿಗೆ ಅತ್ಯಗತ್ಯವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ’ಜಲ ಕುಂಭ’ ವ್ಯವಸ್ಥೆ:

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಜಿಲ್ಲಾ ಪಂಚಾಯತ್, ಎಸ್‌ಪಿ ಕಚೇರಿ ಹಾಗೂ ನ್ಯಾಯಾಲಯದ ಆವರಣ, ಕರ್ನಾಟಕ ಸಂಘ, ಸಂತೇಮೈದಾನ, ಆರ್.ಎಂ.ಸಿ., ಜಿಲ್ಲಾ ಪಂಚಾಯತ್‌ದಂತಹ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮರಗಳ ಕೆಳಗೆ ಪಕ್ಷಿಗಳಿಗಾಗಿ ನೀರಿನ ಪಾತ್ರೆ ಮತ್ತು ಪ್ರಾಣಿಗಳಿಗಾಗಿ ನೀರಿನ ತೊಟ್ಟಿಗಳನ್ನು ತಕ್ಷಣವೇ ಅಳವಡಿಸಬೇಕು.
ತುರ್ತು ಆಹಾರ ಮತ್ತು ಜಲ ಕೇಂದ್ರ :

ನಗರದ ಗಾಂಧಿ ಪಾರ್ಕ್, ಕೋಟೆ ಪರಿಸರ ಹಾಗೂ ಅರಣ್ಯದಂಚಿನ ಸಕ್ರೆಬೈಲು ಮತ್ತು ಗಾಜನೂರು ಭಾಗಗಳಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ತುರ್ತು ಆಹಾರ ಮತ್ತು ನೀರನ್ನು ಒದಗಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಕಾನೂನು ಪ್ರತಿಕ್ರಿಯೆ: ಪ್ರಾಣಿಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುವುದು ಮತ್ತು ಭಾರತೀಯ ಸಂವಿಧಾನದ ವಿಧಿ ೫೧ಎ (ಜಿ) ಅಡಿಯಲ್ಲಿ ಸರ್ಕಾರದ ಕಡ್ಡಾಯ ಜವಾಬ್ದಾರಿಯಾಗಿದೆ. ಕೆರೆಗಳ ಒತ್ತುವರಿ ತಡೆಯುವಲ್ಲಿ ಹಾಗೂ ಜೀವಿಗಳ ರಕ್ಷಣೆಯಲ್ಲಿ ವಿಫಲವಾದರೆ, ನಮ್ಮ ಸಂಘಟನೆಯು ಉನ್ನತ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ನಿರ್ಧರಿಸುತ್ತೇವೆ. ಆದ್ದರಿಂದ, ಈ ಕೂಡಲೇ ಜಿಲ್ಲೆಯ ಎಲ್ಲಾ ಒತ್ತುವರಿಯಾದ ಹಾಗೂ ಒತ್ತುವರಿ ತೆರವು ಮಾಡಿರುವಂತಹ ಕೆರೆಗಳನ್ನು ಸಂರಕ್ಷಿಸಿ ಪುನಃ ಅಭಿವೃದ್ಧಿಪಡಿಸಿ ಕೆರೆಗಳಿಗೆ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳ ಬದುಕುವ ಹಕ್ಕನ್ನು ಎತ್ತಿ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *