<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಪ್ರಧಾನಿಯವರು ಒಂದು ವರ್ಷ ಬಂಗಾರದ ಅಂಗಡಿಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಲಿ : ಬೇಳೂರು

Banner Ad
ಪ್ರಧಾನಿಯವರು ಒಂದು ವರ್ಷ ಬಂಗಾರದ ಅಂಗಡಿಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಲಿ : ಬೇಳೂರು

ಸಾಗರ :   ಬಂಗಾರ ಖರೀದಿ ಮಾಡಬೇಡಿ ಎನ್ನುವ ಬದಲು ಪ್ರಧಾನಿಯವರು ದೇಶದಲ್ಲಿ ಒಂದು ವರ್ಷ ಬಂಗಾರದ ಅಂಗಡಿಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಲಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಎಆರ್‍ಟಿಓ ಕಚೇರಿ ಆವರಣದಲ್ಲಿ  ಪತ್ರಕರ್ತರ ಜೊತೆ ಮಾತನಾಡಿದ ಅವರು ವಿಶ್ವಗುರು ಮಾಡುತ್ತೇವೆ ಎಂದು ಹೇಳಿರುವ ಪ್ರಧಾನಿ ಅವರ ಹೇಳಿಕೆ ಆಶ್ಚರ್ಯ ತಂದಿದೆ.
ಹಿಂದೆ ಕೊರೋನಾ ಸಂದರ್ಭದಲ್ಲಿ ಜಾಗಟೆ ಹೊಡೆಯರಿ ಎಂದಾಗ, ದೀಪ ಹಚ್ಚಿ ಎಂದು ಹೇಳಿದ್ದರು. ಅದನೆಲ್ಲ ದೇಶವಾಸಿಗಳು ಮಾಡಿದ್ದಾರೆ. ಇದೀಗ ಏಕಾಏಕಿ ಬಂಗಾರ ಖರೀದಿ ಮಾಡಬೇಡಿ. ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಎಲ್ಲದ್ದಕ್ಕೂ ಕಡಿವಾಣ ಹಾಕಿದರೆ ಜನಜೀವನ ಹೇಗೆ ಸಾಧ್ಯವಾಗುತ್ತದೆ. ಅಷ್ಟಕ್ಕೂ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದೇಕೆ ಎನ್ನುವುದೇ ಆಶ್ಚರ್ಯವಾಗಿದೆ ಎಂದರು.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದರಿಂದ ಸುಮಾರು 27 ಲಕ್ಷ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತೆ ಆಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ. ಯಾರು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅನ್ವರ್ ಭಾಷಾ, ಜಯರಾಮ್, ಭವ್ಯ, ಗುಡ್ಡೆಮನೆ ನಾಗರಾಜ್, ಕಬೀರ್ ಚಿಪ್ಳಿ, ಕನ್ನಪ್ಪ ಇನ್ನಿತರರು ಹಾಜರಿದ್ದರು.
Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *