<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಸುಮಾರು 10ಕೋಟಿ ವೆಚ್ಚದಲ್ಲಿ ಹಣ್ಣುಗಳ ಸಂರಕ್ಷಣೆಗೆ ಸದ್ಯದರಲ್ಲೇ ಕೋಲ್ಡ್ ಸ್ಟೋರೇಜ್ : ಮಂಜುನಾಥ ಗೌಡ

Banner Ad
ಸುಮಾರು 10ಕೋಟಿ ವೆಚ್ಚದಲ್ಲಿ ಹಣ್ಣುಗಳ ಸಂರಕ್ಷಣೆಗೆ ಸದ್ಯದರಲ್ಲೇ ಕೋಲ್ಡ್ ಸ್ಟೋರೇಜ್ : ಮಂಜುನಾಥ ಗೌಡ

ಶಿವಮೊಗ್ಗ :- ಸುಮಾರು ೮ರಿಂದ 10ಕೋಟಿ ವೆಚ್ಚದಲ್ಲಿ ಎಲ್ಲಾ ರೀತಿಯ ಹಣ್ಣುಗಳ ಸಂರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್‌ನ್ನು ಸದ್ಯದರಲ್ಲೇ ನಿರ್ಮಿಸಲಾಗುವುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ತಿಳಿಸಿದರು.

ಅವರು ಇಂದು ವಿನೋಬನಗರದ ಎಪಿಎಂಸಿ ಪ್ರಾಂಗಣದಲ್ಲಿ ಆಯೋಜಿಸಿದ್ದ ಮಾವು ಮತ್ತು ಹಲಸಿನ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಹಲವಾರು ರೀತಿಯ ಮಾವಿನ ಹಣ್ಣಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಿ ನಡೆಯುತ್ತಿದೆ. ಜೊತೆಗೆ ಹಲಸಿನ ಹಣ್ಣುಗಳನ್ನು ಗ್ರಾಹಕರು ಸುಲಭವಾಗಿ ಖರೀದಿಸಲು ಈ ಮೇಳ ಸಹಕಾರಿಯಾಗಿದೆ ಎಂದರು.

ಈ ನಿಟ್ಟಿನಲ್ಲಿ ಮೇಳ ಪ್ರತಿವರ್ಷ ಯಶಸ್ವಿಯಾಗಿ ನಡೆಯಲು ಆಪ್ ಕಾಮ್ಸ್ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಪರಿಶ್ರಮ ಹೆಚ್ಚಿದೆ. ಈ ಮೂರು ದಿನಗಳ ಮೇಳ ಯಶಸ್ವಿಯಾಗಿ ನಡೆಯಲಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರೈತರು ಬೆಳೆದ ಮಾವು ಹಲಸನ್ನು ಖರೀದಿಸಲು ತಿಳಿಸಿದರು.

ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಇಲ್ಲಿ 60 ರೂ.ಗಳಿಂದ 2600 ರೂ.ಗಳ ವರೆಗಿನ ಮಿಯಾಜಕಿ ಹಣ್ಣು ಕೂಡ ಇಲ್ಲಿ ಲಭ್ಯವಿದೆ. ಜಪಾನಿನಲ್ಲಿ ಮಿಯಾಜಕಿ ಹಣ್ಣು ಒಂದು ಕೆ.ಜಿ.ಗೆ 2.45 ಲಕ್ಷ ರೂ.ಗಳಿಗೆ ಮಾರಾಟವಾಗಿತ್ತು. ಆದರೆ ಇಲ್ಲಿನ ಅನ್ನಪೂರ್ಣೇಶ್ವರಿ ಫಾರಂನ ರಂಗನಾಥ್‌ರವರು ಆ ಹಣ್ಣನ್ನು ಬೆಳೆಸಿದ್ದು, ಕೇವಲ ರೂ. ೨೫೦೦ಕ್ಕೆ ಲಭ್ಯವಿದೆ. ವಿವಿಧ ಜತಿಯ ಹಲಸು ಮತ್ತು ಮಾವಿನ ಹಣ್ಣುಗಳು ಹಾಗೂ ಹಲಸಿನ ಖಾದ್ಯಗಳು, ರೈತರು ಬೆಳೆದ ಇತರ ಹಣ್ಣುಗಳು ಕೂಡ ಈ ಮೇಳದಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಪಕ್ಷಾತೀತವಾಗಿ ಹಾಪ್‌ಕಾಮ್ಸ್ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿದ್ದು, ರೈತರಿಗೆ ಇದರಿಂದ ಅನುಕೂಲವಾಗಿದೆ. ರಾಜಕೀಯ ಮರೆತು ಸದುದ್ದೇಶದಿಂದ ಹಾಪ್‌ಕಾಮ್ಸ್ ಮೂಲಕ ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಮೇಳಗಳನ್ನು ಮಾಡಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಿ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಹಾಪ್‌ಕಾಮ್ಸ್‌ನ ಉಪಾಧ್ಯಕ್ಷ ಶರತ್ ಮರಿಯಪ್ಪ, ನಿರ್ದೇಶಕರಾದ ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ನಾಗೇಶ್‌ನಾಯ್ಕ, ಕೆ.ವಿ. ಗೌಡ್ರು, ನಾರಾಯಣ್, ದಿನೇಶ್‌ಪಟೇಲ್, ನಾಗರಾಜ್, ಶಶಾಂಕ್, ಕಾಂತರಾಜ್, ನರಸಿಂಹಗೌಡ, ಅಶೋಕ್ ಬೇಳೂರು, ಎಂ.ಹೆಚ್. ಕಾಳ್‌ರಾಜ್, ಅಕ್ಷಯ್ ಕೆ.ಆರ್., ಅರುಣ್‌ಕುಮಾರ್ ಮತ್ತಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *