<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಜಿಲ್ಲೆಯಲ್ಲಿ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದೆ : ಕೆಬಿಪಿ ಆತಂಕ

Banner Ad
ಜಿಲ್ಲೆಯಲ್ಲಿ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದೆ : ಕೆಬಿಪಿ ಆತಂಕ

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದ್ದು, ಮತ್ತೊಂದು ಬೆಲೇಕೇರಿ ಹಗರಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಗಣಿ ಮತ್ತು ಭೂ ವಿಜನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸುಮ್ಮನೆ ಕುಳಿತಿವೆ. ೨೦೨೫ರ ಜುಲೈ ೧ರಂದು ೨೨ ಬ್ಲಾಕ್ ಗಳಿಗೆ ಮರಳು ಕ್ವಾರಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ೧೧ ತಿಂಗಳಾದರೂ ಕೂಡ ಇಲಾಖೆಗಳಿಂದ ಇವುಗಳಿಗೆ ಅನುಮತಿ ನೀಡಿದ್ದರೂ ಇನ್ನೂ ಆರಂಭವಾಗಿಲ್ಲ. ಇದರ ಪರಿಣಾಮ ಅಕ್ರಮ ಮರಳುಗಾರಿಕೆ ಹೆಚ್ಚಾಗಿದ್ದು, ಇಲ್ಲಿನ ಮರಳು ಇತರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಸರಬರಾಜಗುತ್ತಿದೆ ಎಂದರು.

ಮರಳು ಮಾಫಿಯಾದ ಬಗ್ಗೆ ಸ್ಥಳೀಯ ಪತ್ರಿಕೆಗಳು ಸುದ್ದಿ ಮಾಡಿದ್ದವು. ಆದರೂ ಕೂಡ ಯಾವ ಅಧಿಕಾರಿಗಳು ಕೂಡ ಸಕ್ರಿಯವಾಗಿಲ್ಲ. ಆದರೆ, ಲೋಕಾಯುಕ್ತರು ಮಾತ್ರ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮಾಡಿ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು ೩೭ ಸಾವಿರ ಮೆಟ್ರಿಕ್ ಟನ್ ಅಕ್ರಮ ಮರಳನ್ನು ಪತ್ತೆ ಹಚ್ಚಿದೆ. ಅಂದರೆ ಸುಮಾರು ೪ ಸಾವಿರ ಲಾರಿ ಲೋಡ್ ನಷ್ಟು ಮರಳು ಇದಾಗುತ್ತದೆ. ಸುಮಾರು ೧೨ ಕೋಟಿ ಬೆಲೆ ಬಾಳಬಹುದಾಗಿದೆ. ಈ ಮರಳನ್ನು ಒಂದು ಕಡೆ ಸಂಗ್ರಹ ಮಾಡಿಡಲಾಗಿದೆ. ಆದರೆ ಈ ಸಂಗ್ರಹ ಮಾಡಿದ ಮರಳನ್ನು ಕಾಯುವವರೇ ಇಲ್ಲವಾಗಿದೆ ಎಂದು ದೂರಿದರು.

ಈ ಸಂಗ್ರಹವಾದ ಮರಳು ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ. ಆದರೆ, ನಿಧಾನವಾಗಿ ಖಾಲಿಯಾಗುವುದಂತೂ ನಿಜ. ಇದನ್ನು ಪೊಲೀಸರಾಗಲೀ, ಅಧಿಕಾರಿಗಳಾಗಲೀ ಕಾಯುತ್ತಲೂ ಇಲ್ಲ. ಮತ್ತೊಂದು ಕಡೆ ಸರ್ಕಾರಿ ಕೆಲಸಕ್ಕೆ ಮರಳು ಬೇಕು ಎಂದು ನೆಪ ಹೇಳಿ ಸಾಗಿಸುವ ಕೆಲಸವೂ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಕೂಡ ಇದರ ಜವಾಬ್ದಾರಿ ಹೊರಬೇಕಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್, ಹೆಚ್.ಎಂ. ಸಂಗಯ್ಯ, ರಮೇಶ್ ನಾಯ್ಕ್, ವೆಂಕಟೇಶ್, ರಘು, ದಯಾನಂದ್, ಸುನಿಲ್ ಗೌಡ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ಲೋಹಿತ್, ಚಂದ್ರಶೇಖರ್ ಮೊದಲಾದವರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *