<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದ ಶಿಷ್ಯ ವೃಂದದಿಂದ ನಾಳೆ ಶ್ರೀ ವಾದಿರಾಜರ ಜಯಂತ್ಯೋತ್ಸವ

Banner Ad
ಶಿವಮೊಗ್ಗದ ಶಿಷ್ಯ ವೃಂದದಿಂದ ನಾಳೆ ಶ್ರೀ ವಾದಿರಾಜರ ಜಯಂತ್ಯೋತ್ಸವ

ಶಿವಮೊಗ್ಗ :- ಇಲ್ಲಿನ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದ ವತಿಯಿಂದ ಜ. 30ರಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರ ಪೂರ್ಣಾನುಗ್ರಹದೊಂದಿಗೆ ಭಾವಿಸಮೀರ ಶ್ರೀ ವಾದಿರಾಜರ 546ನೇ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.

ಜಯಂತ್ಯೋತ್ಸವ ಅಂಗವಾಗಿ ಶ್ರೀ ಮದಾರ್ಯ ಅಕ್ಷೆಭ್ಯ ತೀರ್ಥ ಮೂಲ ಸಂಸ್ಥಾನ ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೆಭ್ಯ ರಾಮಪ್ರಿಯ ತೀರ್ಥ ಶ್ರೀ ಪಾದರು ಇವರ ದಿವ್ಯ ಉಪಸ್ಥಿತಿಯಲ್ಲಿ ತಿಲಕ್ ನಗರದ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದಿಂದ ಸಂಜೆ 4ಗಂಟೆಗೆ ದೈವಜ್ಞ ಕಲ್ಯಾಣ ಮಂದಿರದವರೆಗೆ ಶ್ರೀ ವಾದಿರಾಜರ ಗುರುಗಳ ಭವ್ಯ ರಾಜಬೀದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 7ಗಂಟೆಗೆ ಶ್ರೀ ಮಧ್ವಾದಿರಾಜರಿಗೆ ಪೂಜ ನಮನ ಕಾರ್ಯಕ್ರಮ ನೆರವೇರಲಿದ್ದು, ಮಹಿಳೆಯರಿಂದ ಶ್ರೀ ಲಕ್ಷ್ಮೀ ಶೋಭಾನೆ ಕಾರ್ಯಕ್ರಮವಿದ್ದು, ನಂತರ ಮಂತ್ರಾಕ್ಷತೆ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದ್ದು, ದೈವಜ್ಞ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಿಷ್ಯವೃಂದದ ಮುಖ್ಯಸ್ಥ ಸತೀಶ್ ಕೋರಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *