<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿಕಾರಿಪುರದಲ್ಲಿ ವಿದ್ಯಾರ್ಥಿ ಆತ್ಯಹತ್ಯೆ : ಬುದ್ದಿ ಮಾತು ಹೇಳಿದ್ದೇ ತಪ್ಪಾಯ್ತ ?

Banner Ad
ಶಿಕಾರಿಪುರದಲ್ಲಿ ವಿದ್ಯಾರ್ಥಿ ಆತ್ಯಹತ್ಯೆ : ಬುದ್ದಿ ಮಾತು ಹೇಳಿದ್ದೇ ತಪ್ಪಾಯ್ತ ?

ಶಿಕಾರಿಪುರ :- ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಯೋರ್ವ ಪೋಷಕರ ಬುದ್ದಿಮಾತಿನಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ಆತ್ಯಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವಿನಾಯಕನಗರದ ನಗರದ ನಿವಾಸಿ ಖಾಸಗಿ ಬಸ್‌ ಎಜೆಂಟ್‌ ಹಾಲೇಶ್‌ ದುರ್ಗವ್ವಾರ್ ರವರ ಪುತ್ರ ಜಯಂತ್‌ (18) ಮೃತ ದುರ್ದೈವಿಯಾಗಿದ್ದು,ಕಳೆದ 6 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಕಡಿಮೆ ಅಂಕಗಳಿಸಿದ ಜಯಂತ್‌ ಗೆ ಪೋಷಕರು ಬುದ್ದಿಮಾತು ಹೇಳಿದ್ದರು. ಇದರಿಂದ ಮನನೊಂದ ಆತ ಫಲಿತಾಂಶ ಪ್ರಕಟದ ಮರುದಿನ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದನು. ಕೂಡಲೇ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಗುಣಮುಖನಾಗದ ಹಿನ್ನಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾನೆ.

ಭಾನುವಾರ ಪಟ್ಟಣದ ಕುಮದ್ವತಿ ನದಿ ದಡದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *