
ಶಿವಮೊಗ್ಗ :- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್‌ಐಆರ್ ನೈಜ ಮತ್ತು ಉತ್ಕಷ್ಟ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಒಂದು ಸಮಗ್ರ ಪ್ರಕ್ರಿಯೆ ಆಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಎಸ್‌ಐಆರ್ ಪ್ರಜಪ್ರಭುತ್ವದ ಮಾರಣಹೋಮ ಎಂದು ಕರೆದಿರುವುದಕ್ಕೆ ರಾಷ್ಟ್ರಭಕ್ತರ ಬಳಗದ ಪ್ರಮುಖರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಗ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಪ್ರಜಪ್ರಭುತ್ವ ನಡೆಯುವುದು ಕಾಂಗ್ರೆಸ್‌ಗೆ ಬೇಡವಾಗಿದೆ. ಇದಕ್ಕೆ ತಾಜ ಉದಾಹರಣೆ ಎಂದರೆ ಕಾಂಗ್ರೆಸ್‌ನ ಓಟ್ ಬ್ಯಾಂಕ್‌ಗಳಾದ ಕೆಲವು ದೇಶದ್ರೋಹಿ ಮುಸಲ್ಮಾನರು ಎರಡು-ಮೂರು ಕಡೆ ಮತದಾರರಾಗಿದ್ದುಕೊಂಡು ಮತ ಚಲಾಯಿಸುವುದು ಇದರಿಂದ ತಪ್ಪುತ್ತದೆ ಎಂಬ ಆತಂಕ ಹಾಗೂ ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾ ನುಸುಳುಕೋರರ ಮತಗಳು ಕಾಂಗ್ರೆಸ್‌ಗೆ ಲಭಿಸುವುದಿಲ್ಲ ಎಂಬ ಕಾಂಗ್ರೆಸ್‌ಗೆ ಕಾಡುತ್ತಿದೆ ಎಂದರು.
ಎಸ್‌ಐಆರ್‌ನಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜತಿಯವರ ಹೆಸರನ್ನು ಕೈಬಿಡುವ ಹುನ್ನಾರ ನಡೆದಿದೆ ಎಂದು ಹೇಳುತ್ತಿರುವ ಸಿದ್ಧರಾಮಯ್ಯನವರು ಕೇರಳ ಮತ್ತು ತಮಿಳುನಾಡಿನ ಫಲಿತಾಂಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? ಮತದಾರರ ಪಟ್ಟಿಯಲ್ಲಿ ಯಾವುದೇ ಜತಿ ಮತ್ತು ಧರ್ಮದ ಹೆಸರನ್ನು ಕಲೆ ಹಾಕುವುದಿಲ್ಲ. ಹಾಗಿದ್ದಾಗ ಇವರನ್ನು ಹೇಗೆ ಕೈಬಿಡಲು ಸಾಧ್ಯ ಎಂಬ ಕನಿಷ್ಠ ಜನ ಕೂಡ ಸಿದ್ಧರಾಮಯ್ಯನವರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜವಾಬ್ದಾರಿಯುತ ನಾಗರೀಕರು ನಿಮ್ಮ ಸುತ್ತಮುತ್ತಲು ಅನುಮಾನಾಸ್ಪದ ಬಾಂಗ್ಲಾ ನುಸುಳುಕೋರ ವ್ಯಕ್ತಿಗಳಿದ್ದರೆ ಮತದಾರರ ಪಟ್ಟಿಯಲ್ಲಿ ಸೇರದಂತೆ ನಿಗಾ ವಹಿಸಿ. ಮನೆ ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನಲೆಯಲ್ಲಿ ಪರಿಶೀಲಿಸಿ ಬಾಡಿಗೆ ಕೊಡಬೇಕು. ಶಿವಮೊಗ್ಗದಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆಗೆ ರಾಷ್ಟ್ರಭಕ್ತರ ಬಳಗ ಸಂಪೂರ್ಣ ಬೆಂಬಲ ನೀಡಲಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರಿಗೆ ಎನ್ಯೂಮರೇಷನ್ ಫಾರಂ ಭರ್ತಿಮಾಡಲು ಬಿಎಲ್‌ಓ ಗಳೊಂದಿಗೆ ಕೈಜೋಡಿಸಲಿದ್ದಾರೆ. ಬಿಎಲ್‌ಎಗಳು ಪ್ರತಿ ಮನೆಗೆ ಬರುತ್ತಾರೆ. ಅವರ ಜೊತೆ ನಿಮ್ಮ ಕಾರ್ಯಕರ್ತರನ್ನು ಕೂಡ ಕಳುಹಿಸಿ ಎಂದು ಕಾಂಗ್ರೆಸ್ಸಿಗರಿಗೆ ಹೇಳಿದರು.


