<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್‌ನಿಂದ ಬೃಹತ್ ಮ್ಯಾರಥಾನ್‌ಗೆ ಸಿದ್ಧತೆ

Banner Ad
ಶಿವಮೊಗ್ಗದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್‌ನಿಂದ ಬೃಹತ್ ಮ್ಯಾರಥಾನ್‌ಗೆ ಸಿದ್ಧತೆ

ಶಿವಮೊಗ್ಗ :- ನಗರದ ನೂತನ ಡಾ. ಶರತ್ ಮರಿಯಪ್ಪ ಫೌಂಡೇಷನ್‌ವತಿಯಿಂದ ಜುಲೈ 5ರಂದು ‘ರನ್ ಮಲೆನಾಡು-2026 ಎಂಬ ಬೃಹತ್ ಮ್ಯಾರಥಾನ್ ಕಾರ್ಯಕ್ರಮವನ್ನು ಜುಲೈ 5ರ ಬೆಳಿಗ್ಗೆ 6 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ನಿನ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಮಧುಬಂಗಾರಪ್ಪ, ಸಚಿವ ಸಂತೋಷ್‌ಲಾಡ್, ಆರ್.ಎಂ. ಮಂಜುನಾಥ್ ಗೌಡರು, ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ನಮ್ಮ ಫೌಂಡೇಷನ್ ಇದೀಗ ಆರಂಭವಾಗಿದ್ದು, ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಯೋಚಿಸಿದ್ದು ಇದರ ಹಿನ್ನಲೆಯಲ್ಲಿ ಈಗ ಮ್ಯಾರಥಾನ್ ಎಂಬ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಮ್ಯಾರಥಾನ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಹ್ಯೂಮಥಾನ್ ಎಂಬ ವಿಶೇಷ ಚೇತನರಿಗಾಗಿ ವಿಶೇಷ ಓಟವನ್ನು ಕೂಡ ಆಯೋಜಿಸಲಾಗಿದೆ. ಭಾಗವಹಿಸಿದ ಸಾರ್ವಜನಿಕರಿಗೆ ಸುಮಾರು 2ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಗುವುದು ಹಾಗೂ ಇದಕ್ಕೆ ನೋಂದಣಿ ಅಗತ್ಯವಿದ್ದು, ಮೊದಲ ೨ಸಾವಿರ ನೋಂದಾಯಿತರಿಗೆ ಉಚಿತವಾಗಿ ಟೀಶರ್ಟ್ ಜೊತೆಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.

ಅಥ್ಲೆಟಿಕ್ ಅಸೋಸಿಯೇಷನ್ನಿನ ಮುಖ್ಯಸ್ಥ ಉದಯಕುಮಾರ್ ಮಾತನಾಡಿ, 16ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 20ವರ್ಷದ ಬಾಲಕ-ಬಾಲಕಿಯರಿಗೆ ಕ್ರಮವಾಗಿ ಮೂರು ಕಿ.ಮೀ. ಹಾಗೂ 5 ಕಿ.ಮೀ. ಓಟದ ಸ್ಫರ್ಧೆಯಿದ್ದು, ಎರಡೂ ವಿಭಾಗಗಳಲ್ಲಿ ತಲಾ 3 ಬಹುಮಾನಗಳನ್ನು ನೀಡಲಾಗುತ್ತದೆ. ಅಂದರೆ ಪ್ರಥಮ 3000, ದ್ವಿತೀಯ 2000, ತೃತೀಯ 1000 ರೂ. ಗಳನ್ನು ಎರಡೂ ವಿಭಾಗದಲ್ಲೂ ನಗದು ಬಹುಮಾನ ನೀಡಲಾಗುವುದು. ಹಾಗೆಯೇ ಪುರುಷ ಮತ್ತು ಮಹಿಳಾ ವೃತ್ತಿಪರರಿಗೆ 10 ಕಿ.ಮೀ. ಓಟದ ಸ್ಪರ್ಧೆ ಇದ್ದು, ಇದರಲ್ಲೂ ಕೂಡ ಕ್ರಮವಾಗಿ 10ಸಾವಿರ, 7ಸಾವಿರ ಹಾಗೂ 5ಸಾವಿರ ರೂ.ಗಳನ್ನು ಬಹುಮಾನ ನೀಡಲಾಗುತ್ತದೆ ಎಂದರು.

ಮಹಿಳೆಯರಿಗೆ 5 ಕಿ.ಮೀ. ಸ್ಪರ್ಧೆ ಇದ್ದು, ಇವರಿಗೆ 5000, 3000, 2000 ರೂ.ಗಳನ್ನು ನಗದು ಬಹುಮಾನ ನೀಡಲಾಗುವುದು. ಈ ವರ್ಷ ವಿಶೇಷವಾಗಿ ದಂಪತಿಗಳಿಗಾಗಿ 3 ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಟ್ರೋಫಿ ಹಾಗೂ ವಿಶೇಷ ಉಡುಗೊರೆ ನೀಡಲಾಗುವುದು ಎಂದರು. ನೋಂದಣಿಗೆ ಹಾಗೂ ಹೆಚ್ಚಿನ ವಿವರಗಳಿಗೆ ಮೊ. 8971397718, 8892325558, 8660461910ರಲ್ಲಿ ಸಂಪರ್ಕಿಸಬಹುದು. ಪತ್ರಿಕಾಗೋಷ್ಟಿಯಲ್ಲಿ ರಂಗನಾಥ್, ಉದಯಕುಮಾರ್, ಯಶವಂತ್ ನಾಯಕ್, ಅಶೋಕ್, ಅರುಣ್‌ರಾಜ್, ವಿಜಯಕುಮಾರ್, ದೀಪು, ಪ್ರದೀಪ್, ಶಿವಕುಮಾರ್, ನವೀನ್, ವಿನಯ್, ವಿನೋದ್, ಸಂದೀಪ್ ಮುಂತಾದವರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *