ಬೆಂಗಳೂರು :- ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು ಎನ್ನುವ ನಿರ್ಧಾರವನ್ನು ರಾಜ್ಯ ಸಂಪುಟ ಕೈಗೊಂಡಿದೆ. ಅಲ್ಲದೇ ಫುಟ್‌ಪಾತ್ ವ್ಯಾಪಾರಿಗಳ ಸ್ಥಳಾಂತರಕ್ಕೆ ರಾಜ್ಯ ಸಂಪುಟ ಗ್ರೀನ್ ಸಿಗ್ನಲ್ ನೀಡುವಂತ ತೀರ್ಮಾನವನ್ನು ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದಂತ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇನ್ಮುಂದೆ ಭೂ ಸ್ಥಿತಿಕರಣ (ಲ್ಯಾಂಡ್ ರೆಗ್ಯುಲರೈಸೇಶನ್) ಮಾಡಲಾಗುತ್ತದೆ. ಇನ್ಮುಂದೆ ಯಾವುದೇ ಲೇಔಟ್‌ಗಳಲ್ಲಿ ಖಾಸಗಿ ರಸ್ತೆಗಳು ಇದ್ದರೆ, ಅವುಗಳನ್ನು ಸರ್ಕಾರಿ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು. ಡೆವಲಪರ್‌ಗಳು ಕೇವಲ ಒಂದು ಸೈಟ್ ಹಂಚಿಕೆ ಮಾಡಿದ್ದರೂ ಸಹ, ಆ ಲೇಔಟ್‌ನ ರಸ್ತೆಗಳು ಸ್ವಯಂಚಾಲಿತವಾಗಿ ಸರ್ಕಾರದ ಸ್ವತ್ತಾಗಲಿವೆ. ಅವು ಯಾವುದೇ ಕಾರಣಕ್ಕೂ ಖಾಸಗಿಯವರ ವಶದಲ್ಲಿ
ಪಾದಚಾರಿ ರಸ್ತೆಗಳಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ. ರಸ್ತೆಯ ಪಕ್ಕದಲ್ಲಿ ಒಂದು ಕಡೆ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು. ಈಗಾಗಲೇ ವೆಂಡಿಂಗ್ ಮೆಷಿನ್‌ಗಳಿಗಾಗಿ ಸಾರ್ವಜನಿಕರಿಂದ ಸುಮಾರು 35 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಬ್ಸಿಡಿಯನ್ನೂ ಕೊಡಿಸಲಾಗುವುದು. ತಾವು ಡಿಸಿಎಂ ಆಗಿದ್ದಾಗಲೂ ಈ ಬಗ್ಗೆ ಚರ್ಚಿಸಿದ್ದು, ಇದು ಇಡೀ ಸಚಿವ ಸಂಪುಟ ಸಾಮೂಹಿಕವಾಗಿ ತೆಗೆದುಕೊಂಡಿರುವ ನಿರ್ಧಾರವಾಗಿದೆ.



