ಶಿವಮೊಗ್ಗ:- ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷರೂ, ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷರು, ಹಾಲಿ ಗೌರವಾಧ್ಯಕ್ಷರು, ಹಿಂದೂ ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಹಕಾರಿ ಧುರೀಣರೂ ಆಗಿದ್ದ ಸರಳ ಸಜ್ಜನ ವ್ಯಕ್ತಿತ್ವದ ಎಂ.ಕೆ. ಸುರೇಶ್ ಕುಮಾರ್ (ಚಾಲುಕ್ಯಸೂರಿ) ಅವರು ನಿನ್ನೆ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಶ್ರೀಯುತರು ಪತ್ನಿ, ಈರ್ವ ಪುತ್ರಿಯರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ಅಗಾಧ ಸಂಖ್ಯೆಯಲ್ಲಿ ಸ್ನೇಹಿತರನ್ನು ಹಾಗೂ ಪ್ರೀತಿಸುವ ಅಭಿಮಾನಿಗಳನ್ನು ಹೊಂದಿದ್ದ ಸುರೇಶ್ ಕುಮಾರ್ ಅವರು ಶಿವಮೊಗ್ಗದ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಹಾಲಿ ನಿರ್ದೇಶಕ ರಾಗಿದ್ದರು. ಶಿವಮೊಗ್ಗ ಹೌಸಿಂಗ್ ಸೊಸೈಟಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. ಹಿಂದೂ ಮಹಾಸಭಾ ಗಣಪತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿ ಅಮ್ಮನವರಿಗೆ ಚಿನ್ನದ ಮುಖವಾಡ ಮತ್ತು ರಜತ ದ್ವಾರ ಸಮರ್ಪಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಸುರೇಶ್‌ಕುಮಾರ್ ಅವರು, ನಿನ್ನೆ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದು ವಿಪರ್ಯಾಸ ಸಂಗತಿ.
ಸಂತಾಪ:ಸುರೇಶ್ ಕುಮಾರ್ ಅವರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಮಧುಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮತ್ತು ಪದಾಧಿಕಾರಿಗಳು, ಮಾಜಿ ಶಾಸಕರಾದ ಹೆಚ್.ಎಂ. ಚಂದ್ರಶೇಖರಪ್ಪ, ಕೆ.ಬಿ. ಪ್ರಸನ್ನ ಕುಮಾರ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ| ಸತೀಶ್‌ಕುಮಾರ್‌ಶೆಟ್ಟಿ ಮತ್ತು ನಿರ್ದೇಶಕರು, ಕೋಟೆ ಮಾರಿಕಾಂಬಾ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮತ್ತು ಆಡಳಿತ ಮಂಡಳಿ ನಿರ್ದೇಶಕರು, ಸಿಟಿ ಬ್ಯಾಂಕ್ ಅಧ್ಯಕ್ಷ ಕೆ. ರಂಗನಾಥ್ ಮತ್ತು ನಿರ್ದೇಶಕರು, ಹೌಸಿಂಗ್ ಸೊಸೈಟಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮತ್ತು ನಿರ್ದೇಶಕರು, ಕಾಳಿಕಾ ಪರಮೇಶ್ವರಿ ಸೊಸೈಟಿ ಅಧ್ಯಕ್ಷ ಯುವರಾಜ ಆರ್. ಸಾಲೋಂಖೆ ಮತ್ತು ನಿರ್ದೇಶಕರು, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಮತ್ತು ನಿರ್ದೇಶಕರು, ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ ಮತ್ತು ನಿರ್ದೇಶಕರು, ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ. ಬಸವರಾಜ್ ಮತ್ತು ನಿರ್ದೇಶಕರು, ಶಿವಮೊಗ್ಗ ಚಿನ್ನ-ಬೆಳ್ಳಿ-ಗಿರವಿ ವರ್ತಕರ ಸಂಘದ ಅಧ್ಯಕ್ಷ ವಿ.ಕೆ. ಜೈನ್ ಮತ್ತು ನಿರ್ದೇಶಕರು, ಕುಂಬಾರ ಸಮಾಜದ ಅಧ್ಯಕ್ಷರು ಮತ್ತು ನಿರ್ದೇಶಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಾಲುಕ್ಯ ಸೂರಿಯೆಂದೇ ಚಿರಚರಿಚಿತರಾಗಿದ್ದ ಜನತೆಯ ಪಾಲಿಗೆ ಅಜಾತಶತ್ರು ಎನಿಸಿದ್ದ ಸುರೇಶ್‌ಕುಮಾರ್ ಅವರ ನಿಧನಕ್ಕೆ ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಹೆಚ್.ಎಸ್. ಸುಂದರೇಶ್, ಎಂ. ಶ್ರೀಕಾಂತ್, ಹೆಚ್.ಸಿ. ಯೋಗೀಶ್, ಜಿ.ಡಿ. ಮಂಜುನಾಥ್, ಹೆಚ್.ವಿ. ಮಹೇಶ್ವರಪ್ಪ, ಎಸ್.ಎಸ್. ಜ್ಯೋತಿ ಪ್ರಕಾಶ್, ಎಸ್.ಪಿ. ದಿನೇಶ್, ಎಂ. ಉಮಾಶಂಕರ ಉಪಾಧ್ಯ, ಎಸ್. ದತ್ತಾತ್ರಿ, ಎನ್. ಉಮಾಪತಿ, ಸುನಿಲ್, ಹಿರಿಯ ಪತ್ರಕರ್ತ ಅಭಿನಂದನ್, ಕಾಯಕಯೋಗಿ ಚನ್ನಬಸಪ್ಪ, ನವೀನ್ ದಳವಾಯಿ, ಎಸ್.ಪಿ. ಶೇಷಾದ್ರಿ, ಎಂ. ಶಂಕರ್, ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.


