ಶಿವಮೊಗ್ಗ :- ಪ್ರಜಾಪ್ರಭುತ್ವ ವ್ಯವಸ ಉಳಿಯಲು ಮತಪಟ್ಟಿ ಪರಿಷ್ಕರಣೆ ಅಗತ್ಯ. ಚುನಾವಣಾ ಆಯೋಗಕ್ಕೆ ಇದರ ಅದಿಕಾರವಿದ್ದು, ಈಗಾಗಲೇ ದೇಶದಲ್ಲಿ 9 ಬಾರಿ ಪರಿಷ್ಕರಣೆಯಾಗಿದೆ. ಇದೊಂದು ಮತಪಟ್ಟಿ ಶುದ್ಧಿಕರಣ ಎಂದು ವಕೀಲರು ಹಾಗೂ ಸಾಹಿತಿಗಳಾದ ಎಂ.ಆರ್. ಸತ್ಯನಾರಾಯಣ್ ಹೇಳಿದರು.
ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಎಸ್ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಹಮ್ಮಿಕೊಂಡಿದ್ದ ಬಿಎಲ್ಎ-2 ಕಾರ್ಯಕರ್ತರ ಸಮಾವೇಶ ಹಾಗೂ ಎಸ್ಐಆರ್ ಮಾಹಿತಿ ಕೇಂದ್ರದ ಉದ್ಘಾಟಿಸಿ ಅವರು ಮಾತನಾಡಿ, 2002 ರ ಮತಪಟ್ಟಿಯಲ್ಲಿ ಇಲ್ಲದವರು ಮಾತ್ರ ಅಗತ್ಯ ದಾಖಲೆಗಳನ್ನು ಮತಪಟ್ಟಿ ಪರಿಷ್ಕರಣೆಗೆ ನೀಡಬೇಕು ಎಂದರು.
ಎಸ್ಐಆರ್ ಯಾವುದೇ ಗ್ಯಾರಂಟಿಗಾಗಿ ಅಲ್ಲ, ಇದು ರಾಜಕಿಯ ಪಕ್ಷದ ಕಾರ್ಯಕ್ರಮವೂ ಅಲ್ಲ, ಜಗತ್ತಿನ ಅತೀದೊಡ್ಡ ಮತ್ತು ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಯಾರೊಬ್ಬರೂ ಕೂಡ ಮತದಾನ ದಿಂದ ವಂಚಿತರಾಗಬಾರದು ಮತ್ತು ಹೊರದೇಶದಿಂದ ಅನಧೀಕೃತವಾಗಿ ಬಂದು ಇಲ್ಲಿ ಮತಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಬಾರದು ಎನ್ನುವ ಉದ್ದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ದೇಶದಾದ್ಯಂತ ಎಸ್ಐಆರ್ ಮತದಾರರ ಶೀಘ್ರ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಿಎಲ್ಓಗಳು ಮನೆ ಮನೆಗೆ ಬರಬೇಕು. ಬಂದಿಲ್ಲದಿದ್ದರೆ ಕಾರ್ಯಕರ್ತರೇ ಅವರಿಗೆ ನೆರವು ನೀಡಿ ಎಸ್ಐಆರ್ ಪ್ರಕ್ರಿಯೆಗೆ ಸಹಕರಿಸಬೇಕು. ಬಿಎಲ್ಎ-2 ಅವರಿಗೆ ಎಲ್ಲಾ ವಾರ್ಡ್ಗಳಲ್ಲೂ ರಾಷ್ಟ್ರಭಕ್ತರ ಬಳಗ ತರಬೇತಿ ನೀಡಿದ್ದು, ಅಧಿಕೃತವಾಗಿ ಟ್ಯಾಗನ್ನು ಕೂಡ ನೀಡಿದೆ. ಆ ಕಾರ್ಯಕರ್ತರು ಬಿಎಲ್ಓ ಜೊತೆಗೆ ಬಂದು ಎಸ್ಐಆರ್ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುತ್ತಾರೆ. ಒಂದೇ ಒಂದು ಮತ ಹೋದರೂ ಅದು ದೇಶಕ್ಕೆ ದೊಡ್ಡ ನಷ್ಟ. ಅದಕ್ಕಾಗಿ ಎಸ್ಐಆರ್ ಫಾರಂನ್ನು ತಿಳಿದವರ ಬಳಿಯೇ ಮಾಹಿತಿ ಪಡೆದು ಭರ್ತಿಮಾಡಿ ಅದಕ್ಕಾಗಿಯೇ ಇಲ್ಲಿ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಈ ಸೇವಾ ಕೇಂದ್ರ ಜುಲೈ 29ರ ವರೆಗೆ ಕಾರ್ಯಾಚರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್, ಕೆ.ಈ. ಕಾಂತೇಶ್, ಸುವರ್ಣಾಶಂಕರ್, ಶ್ರೀಕಾಂತ್, ಬಾಲು, ಜಾದವ್, ನವುಲೆ ಈಶ್ವರಪ್ಪ, ಶನೈಶ್ಚರ ದೇವಾಲಯ ಸಮಿತಿಯ ಪ್ರಮುಖರಾದ ವಿ.ರಾಜು, ಸ.ನ. ಮೂರ್ತಿ, ವೆಂಕಟೇಶ್ ಮತ್ತಿತರರಿದ್ದರು.


