<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ರಾಜ್ಯ ಸರ್ಕಾರಕ್ಕೆ ಬೇಸೂರು ಅಣು ಸ್ಥಾವರ ಸ್ಥಾಪಿಸುವ ಯಾವುದೇ ಉದ್ದೇಶ ಇಲ್ಲ : ಬೇಳೂರು ಸ್ಪಷ್ಟನೆ

Banner Ad
ರಾಜ್ಯ ಸರ್ಕಾರಕ್ಕೆ ಬೇಸೂರು ಅಣು ಸ್ಥಾವರ ಸ್ಥಾಪಿಸುವ ಯಾವುದೇ ಉದ್ದೇಶ ಇಲ್ಲ : ಬೇಳೂರು ಸ್ಪಷ್ಟನೆ

ಶಿವಮೊಗ್ಗ :- ಬೇಸೂರು ಅಣು ಸ್ಥಾವರ ಸ್ಥಾಪಿಸುವ ಯಾವುದೇ ಉದ್ದೇಶವು ಇಲ್ಲ. ಸರ್ಕಾರ ಅದನ್ನು ರದ್ದು ಮಾಡಿದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹಾಗೇಯೆ ವಿದ್ಯುತ್ ಖಾಸಗೀಕರಣವನ್ನು ರಾಜ್ಯ ಸರ್ಕಾರ ಒಪ್ಪುವುದೂ ಇಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಾಗರ ತಾಲ್ಲೂಕಿ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂಬ ವದಂತಿಗಳಿದ್ದವು. ಇದು ಕೇಂದ್ರ ಸರ್ಕಾರದ ಯೋಜನೆ ಆಗಿತ್ತು. ರಾಜ್ಯ ಸರ್ಕಾರಕ್ಕೆ ಎನ್‌ಪಿಸಿಐಎಲ್ ಪತ್ರ ಬರೆದಿತ್ತು ಕೂಡ ಇದರ ವಿರುದ್ದ ಜಿಲ್ಲಾದ್ಯಾಂತ ಹೋರಾಟಗಳು ಆರಂಭವಾಗಿದ್ದವು. ನಾನು ಕೂಡ ಹೋರಾಟದಲ್ಲಿ ಭಾಗವಹಿಸಿ ರೈತರ ಪರವಾಗಿ ಇದ್ದೆ. ಆಗ ಮಾತು ಕೂಡ ಕೊಟ್ಟಿದೆ. ರಾಜ್ಯ ಸರ್ಕಾರದ ಜೊತೆ ಮಾತನಾಡಿದ್ದೆ ಕೂಡ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನೆ ಕೈಬಿಟ್ಟಿದೆ. ಹಾಗಾಗಿ ರೈತರು ಭಯ ಪಡುವ ಅಗತ್ಯವಿಲ್ಲ. ಕೇವಲ ಬೇಸೂರು ಅಣುಸ್ಥಾವರ ಮಾತ್ರವಲ್ಲ ರಾಜ್ಯ ಯಾವುದೇ ಭಾಗದಲ್ಲಿ ಅಣುಸ್ಥಾವರನ್ನು ಸ್ಥಾಪಿಸುವುದಿಲ್ಲ ಎಂದು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದರು ಎಂದರು.

ಹಾಗೇಯೆ ವಿದ್ಯುತ್ ಖಾಸಗೀಕರಣದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಕೇಂದ್ರ ಒತ್ತಡ ಹಿನ್ನೆಲೆಯಲ್ಲಿಯೇ ವಿದ್ಯುತ್ ಖಾಸಗೀಕರಣದ ವಿಷಯ ಮುನ್ನಲೆಗೆ ಬಂದಿತ್ತು. ಅದಾನಿಗೋ, ಅಂಬಾನಿಗೋ ನೀಡಲು ಇಂತಹ ಯೋಚನೆಯನ್ನ ಕೇಂದ್ರ ಸರ್ಕಾರ ಮಾಡುತ್ತಿತ್ತು. ರಾಜ್ಯ ಸರ್ಕಾರಕ್ಕೆ ಇದಕ್ಕೆ ಒಪ್ಪಿಲ್ಲ, ಒಪ್ಪುವುದೂ ಇಲ್ಲ. ರೈತರಿಗೆ ಎಂದಿನಂತೆ ಉಚಿತ ವಿದ್ಯುತ್ ಮುಂದುರೆಯಲಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಹಾಗಾಗಿ ಅಣುಸ್ಥಾವರವೂ ಇಲ್ಲ, ವಿದ್ಯುತ್ ಖಾಸಗೀರಣವೂ ಇಲ್ಲ ಎಂಬುದನ್ನು ಸ್ವಷ್ಟಪಡಿಸಿದರು.

ಎಸ್‌ಐಆರ್ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿರುವುದು ಕಂಡು ಬಿಜೆಪಿಯವರೇ ಭಯಕ್ಕೆ ಒಳಾಗಿದ್ದಾರೆ. ಕರ್ನಾಟಕ ಕಲ್ಕತ್ತವು ಅಲ್ಲ. ಹಾಗಾಗಿ ಇಲ್ಲಿ ಭಯ ಪಡುವ ಅಗತ್ಯವೂ ಇಲ್ಲ. ಅಕಸ್ಮಾತ್ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲ್ಲಿ. ಬೇಡ ಎಂದವರು ಯಾರು?. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರಿಗೆ ಮತದಾನ ಕೊಡಬೇಡಿ. ಎಲ್ಲಾ ಧರ್ಮದವರು ದಾಖಲೆ ಕೊಟ್ಟರೆ ಎಲ್ಲರಿಗೂ ಮತದಾನ ಹಕ್ಕು ಸಿಗಲಿದೆ ಎಂದರು.

ಹೈಕೋರ್ಟ್ ಪೀಠ ಶಿವಮೊಗ್ಗದಲ್ಲಿಯೇ ಆಗಬೇಕೆಂಬ ಹೋರಾಟ ನಡೆಯುತ್ತಲೆ ಇದೆ. ಈ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ. ಹಾಗೂ ಮುಖ್ಯಮಂತ್ರಿಗಳ ಬಳಿ ವಕೀಲರು ಹಾಗೂ ಜನಪ್ರತಿನಿಧಿ ನಿಯೋಗವು ಭೇಟಿ ಮಾಡಿ ಮಂಗಳೂರಿನಲ್ಲಿ ಹೈ ಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಬದಲು ಎಲ್ಲಾ ಅನುಕೂಲಗಳಿರುವ ಶಿವಮೊಗ್ಗದಲ್ಲಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದಿಂದ ವಿಮಾನ ಹಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನೈಟ್ ಲ್ಯಾಡಿಂಗ್ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ಉಡಾನ್ ಯೋಜನೆ ಜರಿಯಾದೆ ಸಾಕು ಶಿವಮೊಗ್ಗ ವಿಮಾನಗಳ ಹಾರಾಟ ಆರಂಭವಾಗುತ್ತದೆ ಎಂದರು.

ಅಡಿಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಅಡಿಕೆ ಸಂಬಂಧಿಸಿದಂತೆ ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ ಅಷ್ಟೇ. ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಲಾರಿಗಳನ್ನು ನಿಲ್ಲಿಸುವವರು ಇವರೇ, ಮತ್ತೇ ಬಿಡುಸುವವರು ಇವರೇ ಸುಮ್ಮನ್ನೆ ನಾಟಕವಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *