<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಗೆ ಐಎಸ್‌ಓ ಪ್ರಮಾಣೀಕರಣ

Banner Ad
ಶಿವಮೊಗ್ಗದ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಗೆ ಐಎಸ್‌ಓ ಪ್ರಮಾಣೀಕರಣ

ಶಿವಮೊಗ್ಗ :- ತಿಲಕ್ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಗೆ ಮೂರು ಅಂತರ ರಾಷ್ಟ್ರೀಯ ಐಎಸ್‌ಓ ಪ್ರಮಾಣೀಕರಣಗಳು ಲಭಿಸಿರುವುದು ಸಮಿತಿ ಎಲ್ಲಾ ಸದಸ್ಯರು, ದಾನಿಗಳು ಹಾಗೂ ಭಕ್ತರಿಗೆ ಹೆಮ್ಮೆ ತಂದಿದೆ ಎಂದು ಸಮಿತಿಯ ಕಾರ್ಯದರ್ಶಿ ಹೆಚ್.ವಿ.ಸುರೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯು ಹಲವು ವರ್ಷಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರ್ಶೀವಾದದೊಂದಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಜನಪಯೋಗಿ ಸೇವಾ ಕಾರ್ಯಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿರುವುದನ್ನು ಗುರುತಿಸಿ ಪ್ರಮಾಣೀಕರಣಗಳ ಲಭಿಸಿವೆ ಎಂದರು.

ಸಮಿತಿಯ ಗುಣ್ಣಮಟ್ಟದ ನಿರ್ವಹಣಾ ವ್ಯವಸ್ಥೆ, ಪರಿಸರ ನಿರ್ವಹಣಾ ವ್ಯವಸ್ಥೆ ಹಾಗೂ ಔದ್ಯೋಗಿಕ ಆರೋಗ್ಯ ಮತ್ತು ಸಂರಕ್ಷಣಾ ನಿರ್ವಹಣಾ ವ್ಯವಸ್ಥೆ ಗಳನ್ನು ಗುರುತಿಸಿ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಸೇವಾ ಮೂಲಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಿತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸೇವಾ ಸಮಿತಿಗಳನ್ನಾಗಿ ರೂಪಿಸುವ ಸಂಕಲ್ಪವನ್ನು ಹೊಂದಿದ್ದೇವೆ ಎಂದರು.

ಐಎಸ್‌ಓ ಪ್ರಮಾಣೀಕರಣವು ನಮ್ಮ ಸಾಧನೆ ಸಾಧನೆಯ ಅಂತ್ಯವಲ್ಲ. ಇನ್ನಷ್ಟು ಜವಾಬ್ದಾರಿಯುತ, ಪಾರದರ್ಶಕ ಹಾಗೂ ಸಮಾಜಮುಖಿ ಸೇವೆಗೆ ಹೊಸ ಆರಂಭವಾಗಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಉಡುಪಿಯ ಅಧಮಾರು ಮಠದ ಸ್ವಾಮೀಜಿ ವಿಶ್ವಪ್ರಿಯ ತೀರ್ಥ ಶ್ರೀ ಪಾದಂಗಳವರು ಮಠದಲ್ಲಿ ಸೋಮವಾರ ನಡೆದ ಭಾಗವತ ಪ್ರವಚನ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು ಎಂದರು.

ಪ್ರತಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಡಿ. ಲಕ್ಷ್ಮೀಕಾಂತ, ಖಜಂಚಿ ಗುರುಪ್ರಸಾದ್, ನಿರ್ದೇಶಕರಾದ ಶ್ರೀನಿವಾಸ್, ಪಿ.ಆರ್. ಜೋಷಿ, ನಾಗರಾಜ್, ಶಿವರಾಂ ಹೆಬ್ಬಾರ್, ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಮೂರ್ತಿ, ಭಕ್ತರಾದ ಆ.ನಾ.ವಿಜಯೇಂದ್ರ ರಾವ್, ವಾದಿರಾಜ್ ಇನ್ನಿತರರು ಉಪಸ್ಥಿತರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *