<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗ ವಿಧಾನಸಭಾ ಕ್ಷೇತ್ರ : ಜುಲೈ 25- 26 ರಂದು ಮತದಾರರ ಪಟ್ಟಿಯ ‘ವಿಶೇಷ ಪ್ರಚಾರ ದಿನ’

Banner Ad
ಶಿವಮೊಗ್ಗ ವಿಧಾನಸಭಾ ಕ್ಷೇತ್ರ : ಜುಲೈ 25- 26 ರಂದು ಮತದಾರರ ಪಟ್ಟಿಯ ‘ವಿಶೇಷ ಪ್ರಚಾರ ದಿನ’

ಶಿವಮೊಗ್ಗ :-ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್)-2026ರ ಅಂಗವಾಗಿ ‘ವಿಶೇಷ ಪ್ರಚಾರ ದಿನ’ ವನ್ನು ಮಹಾನಗರ ಪಾಲಿಕೆ ಆವರಣದಲ್ಲಿ ಜು.25 ಮತ್ತು 26 ರಂದು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಆಯೋಜಿಸಲಾಗಿದೆ.

ಮಾಹಿತಿ ಹಾಗೂ ಅರ್ಜಿ ಸಹಾಯ: ಎಸ್ ಐ ಆರ್ ಸಂಬಂಧಿತ ಮಾಹಿತಿ ಮತ್ತು ಫಾರಂ ಭರ್ತಿ ಮಾಡಲು ಸಹಾಯ ಪಡೆಯಲು ತಮ್ಮ ಇತ್ತೀಚಿನ ಫೋಟೋ ಹಾಗೂ ಗುರುತಿನ ಚೀಟಿ ಯೊಂದಿಗೆ ಆಗಮಿಸಬೇಕಾಗಿರುತ್ತದೆ.ಹೆಸರು ಸೇರ್ಪಡೆಗೆ ಕಡ್ಡಾಯ: ಭರ್ತಿ ಮಾಡಿದ ಫಾರಂಗಳನ್ನು ಬಿಎಲ್ಓ (ಬೂತ್ ಲೆವೆಲ್ ಆಫೀಸರ್) ರವರಿಗೆ ನೀಡದಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ.

ಭರ್ತಿ ಮಾಡಿ ಸಹಿ ಮಾಡಿದ ಫಾರಂಗಳನ್ನು BLO ರವರು ನಿಮ್ಮ ಮನೆಗೆ ಭೇಟಿ ನೀಡಿದಾಗ ನೀಡಬಹುದು ಅಥವಾ ವಿವಿಧ ರಾಜಕೀಯ ಪಕ್ಷಗಳ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್) ಅವರ ಮೂಲಕವೂ ಬಿಎಲ್ಓ ರವರಿಗೆ ತಲುಪಿಸಬಹುದಾಗಿದೆ. ಅರ್ಹ ಸಾರ್ವಜನಿಕರು ಹಾಗೂ ಮತದಾರರು ಈ ‘ವಿಶೇಷ ಪ್ರಚಾರ ದಿನ’ದ ಸೌಲಭ್ಯವನ್ನು ಬಳಸಿಕೊಳ್ಳಬೇಕಾಗಿ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅವರು ಕೋರಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *