ಶಿವಮೊಗ್ಗ:- ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕರು, ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹೆಚ್.ಎಂ. ಚಂದ್ರಶೇಖರಪ್ಪ (78) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹೆಚ್.ಎಂ.ಚಂದ್ರಶೇಖರಪ್ಪ ಅವರು ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಗಾಜನೂರಿನಿಂದ ಮಂಡ್ಲಿಯ ಕೆಆರ್ಎಸ್ ವಾಟರ್ ವರ್ಕ್ಸ್ ವರೆಗೆ ಪೈಪ್ಲೈನ್ಗಳನ್ನು ಅಳವಡಿಸುವ ಕಾಮಗಾರಿಯ ಮೂಲಕ ಶಿವಮೊಗ್ಗ ಜನತೆಗೆ ಉಂಟಾಗುತ್ತಿದ್ದ ನೀರಿನ ಸಮಸ್ಯೆಯನ್ನು ಬಗೆಹರಿಸಿ ಶಿವಮೊಗ್ಗದ ಆಧುನಿಕ ಭಗಿರಥ ಎಂಬ ಹೆಸರನ್ನು ಗಳಿಸಿದ್ದರು. ಶ್ರೀಯುತರು ಶಾಸಕರಾಗಿದ್ದ ಸಂದರ್ಭದಲ್ಲಿ ಕುವೆಂಪು ರಂಗಮಂದಿರ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿರ್ಮಾಣದಲ್ಲಿ ಹೆಚ್ಎಂಸಿಯವರ ಪಾತ್ರ ಅತ್ಯಂತ ಮಹತ್ತರವಾಗಿತ್ತು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕ ಕಾಲ ಸೇವೆ ಸಲ್ಲಿಸಿದ್ದ ಹೆಚ್ಎಂಸಿ ಅವರು ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. 1997/98ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಕೆ.ಎಸ್. ಈಶ್ವರಪ್ಪ ವಿರುದ್ದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಮಾಜಿ ಶಾಸಕರ ವೇತನ ಹೆಚ್ಚಳ ಮಾಡುವಲ್ಲಿ ಹೋರಾಟ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದರು.
ಶ್ರೀಯುತರು ಮಾಜಿ ಕಾರ್ಪೊರೇಟರ್ ಹೆಚ್.ಸಿ. ಯೋಗೀಶ್, ಉದ್ಯಮಿ ಶರಣ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಇಂದು ಸಂಜೆ ಹೊಸಹಳ್ಳಿ ತೋಟದಲ್ಲಿ ಹೆಚ್.ಎಂ.ಸಿ.ಯವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಗಣ್ಯರ ಸಂತಾಪ

ಹೆಚ್.ಎಂ.ಸಿ.ಯವರ ನಿಧನಕ್ಕೆ ಸಿರಿಗೆರೆ ಮಠ, ಸಾಣೆಹಳ್ಳಿ ಮಠ, ಬಸವಕೇಂದ್ರ, ಬೆಕ್ಕಿನಕಲ್ಮಠ ಶ್ರೀಗಳು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ| ಧನಂಜಯ ಸರ್ಜಿ, ಬಲ್ಕಿಶ್ಭಾನು, ವಿಧಾನಪರಿಷತ್ ಮಾಜಿ ಶಾಸಕರಾದ ಎಸ್. ರುದ್ರೇಗೌಡರು, ಮಾಜಿ ಸಂಸದ ಆಯನೂರು ಮಂಜುನಾಥ್, ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೆಚ್.ಎಂ.ಸಿ. ನಿಧನಕ್ಕೆ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಕಾರ್ಯದರ್ಶಿ ಎಸ್.ಪಿ. ದಿನೇಶ್ ಮತ್ತು ಪದಾಧಿಕಾರಿಗಳು, ವೀರಶೈವ ಕಲ್ಯಾಣ ಮಂದಿರ ಸಮಿತಿ ಅಧ್ಯಕ್ಷ ಜೆ. ವಿರೂಪಾಕ್ಷಪ್ಪ, ಕಾರ್ಯದರ್ಶಿ ಪಿ.ಎಸ್. ಹಾಲಸ್ವಾಮಿ, ವ್ಯವಸ್ಥಾಪಕ ಪರಮೇಶ್ವರಯ್ಯ ಮತ್ತು ಪದಾಧಿಕಾರಿಗಳು, ಬಸವೇಶ್ವರ ಸೊಸೈಟಿ ಅಧ್ಯಕ್ಷ ಬಳ್ಳೆಕೆರೆ ಸಂತೋಷ್, ಉಪಾಧ್ಯಕ್ಷ ತಾರಾನಾಥ್ ಮತ್ತು ಪದಾಧಿಕಾರಿಗಳು, ಅ.ಭಾ. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮತ್ತು ಪದಾಧಿಕಾರಿಗಳು, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ, ಕಾರ್ಯದರ್ಶಿ ಎಸ್.ಪಿ. ಜಗನ್ನಾಥ್ ಮತ್ತು ಪದಾಧಿಕಾರಿಗಳು, ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನಕ್ಕೆ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಕಡಿದಾಳ್| ಗೋಪಾಲ್, ವಿ.ಸಿ.ಎಸ್. ಮೂರ್ತಿ, ಎಂ.ಆರ್. ಪ್ರಕಾಶ್, ಕೆ. ರಂಗನಾಥ್, ಉಮಾಶಂಕರ ಉಪಾಧ್ಯಾಯ, ಬಾಳೆಕಾಯಿ ಮೋಹನ್, ಕಾಯಕಯೋಗಿ ಚನ್ನಬಸಪ್ಪ, ಆನಂದಮೂರ್ತಿ, ಆರ್. ಹಾಲೇಶ್, ವಿ.ಟಿ. ಅರುಣ್, ಶಶಿಧರ್, ಟಿ.ಬಿ. ಜಗದೀಶ್, ಬಸವರಾಜ್, ಮಹೇಶ್ಮೂರ್ತಿ, ಮಹಾಲಿಂಗಯ್ಯ ಶಾಸ್ತ್ರಿ, ರೇಣುಕಾರಾಧ್ಯ, ಡಾ| ಶರತ್ ಮರಿಯಪ್ಪ, ಎಸ್.ಬಿ. ಅಶೋಕ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


