<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ರಾಗರಂಜಿನಿ‌ ಟ್ರಸ್ಟ್ ನಿಂದ ಸಂಜೆ ಎಸ್. ಜಾನಕಿ ಅವರ ನೆನಪಿನಲ್ಲಿ ಗಾಯನ

Banner Ad
ರಾಗರಂಜಿನಿ‌ ಟ್ರಸ್ಟ್ ನಿಂದ ಸಂಜೆ ಎಸ್. ಜಾನಕಿ ಅವರ ನೆನಪಿನಲ್ಲಿ ಗಾಯನ

ಶಿವಮೊಗ್ಗ :- ನಗರದ ರಾಗ ರಂಜನಿ ಟ್ರಸ್ಟ್ ವತಿಯಿಂದ ಕನ್ನಡ ಚಿತ್ರರಂಗದ ಸುಮಧುರ ಕೋಗಿಲೆ ಎಸ್ ಜಾನಕಿ ಅವರ ನೆನಪಿನಲ್ಲಿ `ಕಂಗಳು ವಂದನೆ ಹೇಳುವೆ’ ಎಂಬ ಶೀರ್ಷಿಕೆಯಡಿ ವಿಶೇಷ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆ. 7ರ ಇಂದು ಸಂಜೆ 5.45ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ನಿರ್ದೇಶಕ ಹಾಗೂ ಖ್ಯಾತ ಗಾಯಕ ಪ್ರಹ್ಲಾದ್ ದೀಕ್ಷಿತ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜಾನಕಿ ಅಮ್ಮನವರ ಹಾಡುಗಳು ನಮ್ಮ ಬದುಕಿನ ಭಾಗ. ಅವರ ನೆನಪಿಗೆ ಇದು ನಮ್ಮ ವಂದನೆ ಎಂದರು.

ಕಳೆದ 10 ವರ್ಷದಿಂದ ರಾಗ ರಂಜನಿ ಟ್ರಸ್ಟ್ ಹಲವು ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು, ಈ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ದೀಕ್ಷಿತ್ ಮತ್ತು ಅವರ ಶಿಷ್ಯವೃಂದದಿಂದ ಎಸ್. ಜಾನಕಿ ಅವರು ಹಾಡಿದ ಸುಮಧುರ ಕನ್ನಡ ಚಲನಚಿತ್ರ ಗೀತೆಗಳು ಪ್ರಸ್ತುತಗೊಳ್ಳಲಿವೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಸಂಗೀತ ವಿದ್ವಾಂಸ ಡಾ.ಎಸ್.ಆರ್. ನಾಗರಾಜ್, ಉದ್ಯಮಿ ಕೆ.ಕೆ. ಕಾಂತೇಶ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಗ ರಂಜನಿ ಟ್ರಸ್ಟ್ ಅಧ್ಯಕ್ಷ ಮಾನವೇಂದ್ರ ದೀಕ್ಷಿತ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರವೇಶ ಉಚಿತವಾಗಿದ್ದು ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ-9611427586, 8147501974. ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿ, ಅನುಷಾ, ತುಷಾರಿ, ಸುಷ್ಮಾ, ಪ್ರಶಾಂತ್, ಸುಮ, ಶಾರದ ಉಪಸ್ಥಿತರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *