<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಸೋಮವಾರದ ವೇಳೆಗೆ ಖಾತೆ ಹಂಚಿಕೆ ಆಗಬಹುದು : ಮಧು ಬಂಗಾರಪ್ಪ

Banner Ad
ಸೋಮವಾರದ ವೇಳೆಗೆ ಖಾತೆ ಹಂಚಿಕೆ ಆಗಬಹುದು : ಮಧು ಬಂಗಾರಪ್ಪ

ಶಿವಮೊಗ್ಗ :- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ಅಣ್ಣನ ಸಮಾನ. ಅವರಿಗೆ ನಮ್ಮ ತಂದೆಯ ಮೇಲೆ ಅಪಾರ ಗೌರವ ಇರುವುದರಿಂದ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇರಿಸಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಈ ಹಿಂದೆ ಸಚಿವನಾಗಿದ್ದಾಗ ಯಾವುದೇ ನಿರೀಕ್ಷೆ ಯೆಲ್ಲದೆ ಶಿಕ್ಷಣ ಖಾತೆ ನೀಡಿದ್ದರು. ಈ ಬಾರಿ ಅಂತಹ ಯಾವುದೇ ನಿರೀಕ್ಷೆ ಯಿಲ್ಲ, ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಅಥವಾ ಈ ಹಿಂದೆ ಇದ್ದ ಶಿಕ್ಷಣ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

ಕಾಂಗ್ರೆಸ್‌ನ ಜಿಲ್ಲಾ ಕಾರ್‍ಯಕರ್ತರಿಗೆ ಧನ್ಯವಾ ಸಲ್ಲಿಸುತ್ತೇವೆ. ನಾನು ಸಚಿವ ನಾಗಿದ್ದಾಗ ಜಿಲ್ಲಾ ಸರ್ವಾಂಗೀಣ ಅಭಿವೃದ್ದಿ ವಿಚಾರವಾಗಿ ಎಲ್ಲಾ ರೀತಿ ಸಹಕಾರ ನೀಡಿದ್ದರು. ಈ ಬಾರಿ ಅಂತಹ ಸಹಕಾರವನ್ನು ಬಯಸುತ್ತೇನೆ. ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯ ಅತಿವೃಷ್ಟಿ ಮತ್ತು ಬರ ಪರಿಶೀಲನೆ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಸಂಪುಟ ಪುನರ್‌ರಚನೆ ಮತ್ತು ಗೊಂದಲಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಸೋಮವಾರದ ವೇಳೆಗೆ ಖಾತೆ ಹಂಚಿಕೆ ಆಗಬಹುದು. ಬೇಳೂರು ಗೋಪಾಲ ಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ದೊರಕಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಇನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಕುಮಾರ್ ಬಂಗಾರಪ್ಪ ಒಳ್ಳೆದಾಗಲಿ : ಮಧು ಬಂಗಾರಪ್ಪ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದರು. ಕಾಗೋಡು ತಿಮ್ಮಪ್ಪ ಅವರು ನನ್ನ ತಂದೆ ಸಮಾನ ಸಚಿವ ಸ್ಥಾನ ಪಡೆದು ಅವರ ಆಶೀವಾದ ಪಡೆದಿದ್ದೇನೆ ಎಂದರು. ಸಚಿವ ಮಧು ಬಂಗಾರಪ್ಪನವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾಗ ಕಾರ್‍ಯಕರ್ತರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನೆನ್ನೆ ಸಣ್ಣಪುಟ್ಟ ಗೊಂದಲಗಳಾಗಿವೆ. ಎರಡು ಕಡೆಯವರನ್ನು ಕರೆಸಿ ಮಾತನಾಡಿದ್ದೇನೆ. ಸಚಿವರು ಬರುವ ಸಂದರ್ಭದಲ್ಲಿ ಎಲ್ಲರೂ ಸೇರಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ಅಗೌರವ ತೋರಿಸಿದ್ದಾರೆಂದು ಕೆಲ ಕಾರ್ಯಕರ್ತರು ದೂರು ನೀಡಿದ್ದಾರೆ. ಆ ಸಂದರ್ಭದಲ್ಲಿ ತಳ್ಳಾಟ ನೂಕಾಟ ವಾಗಿದೆ. ಅದು ಪಕ್ಷದ ವಿಚಾರವಲ್ಲ. ಅವರ ವೈಯಕ್ತಿಕ ಕಾರಣಕ್ಕೆ ಸ್ವಲ್ಪ ಗೊಂದಲವಾಗಿದೆ. ಇಬ್ಬರನ್ನು ಕರೆಸಿ ಸಮಾಧಾನ ಪಡಿಸಿದ್ದೇವೆ ಎಂದರು. ಪಕ್ಷದ ಮುಂಖಡರಾದ ಆರ್. ಪ್ರಸನ್ನಕುಮಾರ್ ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ಎಸ್.ರವಿಕುಮಾರ್, ಎನ್. ರಮೇಶ್, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಶಿವಕುಮಾರ್, ರಂಗನಾಥ್, ಚೇತನ್ ಗೌಡ, ಗಿರೀಶ್, ಚಿನ್ನಪ್ಪ ಇನ್ನಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *