ಶಿವಮೊಗ್ಗ:- ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಕಳೆದ 40 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಅವರು ಹುಟ್ಟು ಹಬ್ಬವನ್ನು ಆ. 12 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಎಂ.ಗುರುಮೂರ್ತಿ ಅವರು ಅಭಿಮಾನಿ ಬಳಗದ ಕಾರ್ಯಕ್ರಮ ಸಂಚಾಲಕ ಹಾಗೂ ಡಿಎಸ್‌ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಎಸ್‌ಎಸ್ ಗೆ ತನ್ನದೆ ಆದ ಕೊಡುಗೆಯನ್ನು ಗುರುಮೂರ್ತಿ ಅವರು ನೀಡಿದ್ದಾರೆ. ಪ್ರೊ.ಬಿ.ಕೃಷ್ಣಪ್ಪ ಅವರು ಸಾಮಾಜಿಕ ನ್ಯಾಯ, ಸಮಾನತೆಗಾಗಿ ಸ್ಥಾಪಿಸಿದ್ದ ಡಿಎಸ್‌ಎಸ್ ಮೂಲ ನಾಯಕರು ಆಗಿದ್ದಾರೆ. ಪ್ರೊ. ಬಿ.ಕೃಷ್ಣಪ್ಪನವರ ಸಾಮಾಜಿಕ ನ್ಯಾಯಗಳನ್ನು ದಲಿತರು, ಬಡವರು ಹಾಗೂ ಶೋಷಿತರಿಗೆ ತಲುಪಿಸುವ ನಿಟ್ಟಿನಲ್ಲಿ ಕಳೆದ 40 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ ಮತ್ತು ಕೃಷ್ಣಪ್ಪನವರ ಮೂಲ ಸಂಘಟನೆಯ ಅಧಿಕೃತವೆಂದು ನ್ಯಾಯಾಲಯದಲ್ಲಿ ಹೋರಾಟ ಮಾಡಿ ಜಯಗಳಿಸಿದ್ದಾರೆ. ಅವರ ದಾರಿಯಲ್ಲಿಯೇ ಗುರುಮೂರ್ತಿಯವರು ಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಸಾರ್ಥಕ ರೀತಿಯಲ್ಲಿ ಆಚರಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಆ. 12ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹುಟ್ಟುಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಾಜಿ ಸಂಸದ ಆಯನೂರು ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಡಿಎಸ್‌ಎಸ್‌ನ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪಕಾಕರ್ಗಲ್, ಪ್ರಮುಖರಾದ ತಿಪ್ಪೆಸ್ವಾಮಿ,ಮೋಹನ್, ಗುರುನಾಥ್, ಸುಜತ ದೊಡ್ಡಮನೆ, ಕೆ.ವಿ. ಶಿವಕುಮಾರ್, ಹೊನ್ನಾಳಿ ಚಂದ್ರಶೇಖರ್, ಪ್ರೋ.ಪ್ರಸನ್ನಕುಮಾರ್, ಡಾ.ಕೆ.ಚಂದ್ರಪ್ಪ, ಹನುಮಂತಪ್ಪ ಎಡವಾಲ ಮುಂತಾದವರು ಭಾಗವಹಿಸುತ್ತಾರೆ. ಜಿಲ್ಲಾ ಸಂಚಾಲಕ ಎಂ.ಏಳುಕೋಟಿ ಕ್ರಾಂತಿಗೀತೆಗಳನ್ನ ಹಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಆಸ್ಪತ್ರೆಯ ನಾನ್ ಕ್ಲಿನಿಕ್ ವಿಭಾಗದ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಮಹಾನಗರ ಪಾಲಿಕೆ ಮಹಿಳಾ ಪೌರಕಾರ್ಮಿಕರಿಗೆ ಸುಮಾರು 250 ಸೀರೆಗಳನ್ನು ಮತ್ತು ಸುಮಾರು 250 ರೈತರಿಗೆ ತೆಂಗಿನ ಸಸಿಗಳನ್ನು ನೀಡಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಂಖಡರುಗಳಾದ ಜೀನಳ್ಳಿ ಆಶೋಕ್, ಯಡವಾಲ ಹನುಮಂತಪ್ಪ, ಕೃಷ್ಣಪ್ಪ, ಚಂದ್ರಪ್ಪ ಜೋಗಿ, ಚಿಕ್ಕಮರಡಿ ರಮೇಶ್, ಹರಿಗೆ ರವಿ, ಕರಿಯಪ್ಪ, ಲಕ್ಷ್ಮಣ್, ಶ್ರೀನಿವಾಸ್ ಬೊಮ್ಮನಹಳ್ಳಿ, ನಾಗರಾಜ್, ರಾಜಶೇಖರ್ ಸೇರಿದಂತೆ ಇನ್ನಿತರರು ಇದ್ದರು.


