<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳಾಗಲು ಜಿಲ್ಲೆಯ ಜನರು ಸಂಸದರಿಗೆ ಶಕ್ತಿ ನೀಡಿ : ಯಡಿಯೂರಪ್ಪ

Banner Ad
ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳಾಗಲು ಜಿಲ್ಲೆಯ ಜನರು ಸಂಸದರಿಗೆ ಶಕ್ತಿ ನೀಡಿ : ಯಡಿಯೂರಪ್ಪ

ಶಿವಮೊಗ್ಗ :- ಇಡೀ ರಾಜ್ಯದಲ್ಲಿ ಈ ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಲಾಗಿದೆ. ಇದರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪಾತ್ರವೂ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಬಿಜೆಪಿ ಗ್ರಾಮಾಂತರ ಘಟಕದಿಂದ ನಗರದ ಬಂಜರ ಕನ್ವೆನ್‌ಶನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾಲ್ಕು ಬಾರಿ ಸಂಸದರಾದ ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆಪ್ರಾಮಾಣಿಕವಾಗಿ ಶ್ರಮಿಸಿದ್ದು, ಕಳೆದ ಹತ್ತಾರು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಸಿದ್ಧವಿದ್ದು ಜಿಲ್ಲೆಯ ಜನತೆ ಶಕ್ತಿ ನೀಡಬೇಕು ಎಂದರು.

ಹಿಂದೆ ಹಣ, ಹೆಂಡ, ತೋಳ್ಬಲದಲ್ಲಿ ರಾಜಕಾರಣ ಮಾಡಲಾಗುತ್ತಿತ್ತು.ಆದರೆ ಮುಂದಿನ ದಿನಗಳಲ್ಲಿ ಅಂತಹ ದೊಂಬರಾಟಗಳು ನಡೆಯುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿದ್ದಾರೆ.ಯೋಚಿಸುವ ಶಕ್ತಿ ಎಲ್ಲರಲ್ಲಿಯೂ ಇದೆ.ಹೀಗಾಗಿ ಕೆಲಸವೇ ಮತನಾಡುತ್ತವೆ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಸಮಾಜದವರಿಗೂ ಸುಸಜ್ಜಿತವಾದ ಸಮುದಾಯ ಭವನಗಳನ್ನು ಮಾಡಿ ಕೊಡಲಾಗಿದೆ. ನಗರದಿಂದ ಬೆಂಗಳೂರಿಗೆ ಹಾರುತ್ತಿದ್ದ ವಿಮಾನ ನಿಂತು ಹೋಗಿದ್ದವು. ಕೆಲವೇ ದಿನಗಳಲ್ಲಿ ಅವುಗಳ ಹಾರಾಟ ಆರಂಭವಾಗಲಿದೆ ಎಂದರು.

ಇಲ್ಲಿ ಹಿರಿಯ ಕಾರ್ಯಕರ್ತರರಿಗೆ ಸನ್ಮಾನ ಮಾಡಿದ್ದು, ನಿಮಗೆ ವಯಸ್ಸಾಗಿದೆ. ನೀವು ಮನೆಯಲ್ಲಿ ಇರಿ ಎಂದಲ್ಲ. ೧೮ ವರ್ಷದ ಹುಡುಗರಂತೆ ಮತ್ತಷ್ಟು ಕೆಲಸ ಮಾಡಿಯೆಂದು. ಹೀಗಾಗಿ ಕ್ಷೇತ್ರದಲ್ಲಿ ಓಡಾಟ ಮಾಡಿ ಸಂಘಟನೆ ಮಾಡುವಂತೆ ಪ್ರೇರೇಪಿಸಿದರು.

ಸಂಸದ ರಾಘವೇಂದ್ರ ಮಾತನಾಡಿ, ಕಾರ್ಯಕರ್ತರು, ಮತದಾರರ ಹಾರೈಕೆ ಮುಂದೆ ನಾನೇನು ಅಲ್ಲ. ನಾನು ಮಾಜಿ ಸಿಎಂ ಮಗ, ಸಂಸದ ಎಂಬುದು ತೃಣ ಸಮಾನ. ನೀವು ಹಾಕಿರುವ ಫ್ಲೆಕ್ಸ್‌ಗಳು, ಹಾರ, ತುರಾಯಿ, ತೋರುತ್ತಿರುವ ಅಭಿಮಾನ ಅತೀ ದೊಡ್ಡದು. ನಿಮ್ಮ ಹೋರಾಟದ ಫಲವಾಗಿ ನಾನು ಸಂಸದನಾಗಿದ್ದೇನೆ.ನಿಮ್ಮ ಹಾರೈಕೆ ಇದ್ದರೆ ಇನ್ನಷ್ಟು ಸೇವೆ ಮಾಡುತ್ತೇನೆ ಎಂದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *