ಶಿವಮೊಗ್ಗ :- ಪ್ರಸ್ತುತ ದಿನಮಾನಗಳಲ್ಲಿ ಹವಾಮಾನದ ವೈಪರೀತ್ಯದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಹಜವಾಗಿದೆ. ಆದ ಕಾರಣ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆಯ ಅವಶ್ಯಕತೆ ಇದೆ ಎಂದು ಗ್ಯಾಲಕ್ಸಿ ಹೆಲ್ತ್ ಇನ್ಶೂರೆನ್ಸ್ ಕಂ ಲಿಮಿಟೆಡ್ ಝೋನಲ್ ಹೆಡ್ ಉಪೇಂದ್ರ ಕುಮಾರ್ ನಾಯಕ್ ತಿಳಿಸಿದರು.
ನಗರದ ರೋಟರಿ ಈಸ್ಟ್ ಶಾಲೆ ರಾಜೇಂದ್ರ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ “ಅರೋಗ್ಯ ಮತ್ತು ವಿಮೆ” ಎಂಬ ವಿಷಯದ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ರೋಟರಿ ಸದಸ್ಯರುಗಳನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಹಕರ ರಕ್ಷಣೆಯನ್ನು ಗರಿಷ್ಠಗೊಳಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆರೋಗ್ಯ ವಿಮೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು.
ಅತ್ಯುತ್ತಮ ಆರೋಗ್ಯ ವಿಮಾ ರಕ್ಷಣೆಯನ್ನು ಆಯ್ಕೆ ಮಾಡಲು, ನಿಮ್ಮ ಪ್ರಸ್ತುತ ಆರೋಗ್ಯ ಸ್ಥಿತಿ, ವೈದ್ಯಕೀಯ ಇತಿಹಾಸ ಮತ್ತು ನಿರೀಕ್ಷಿತ ವೈದ್ಯಕೀಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ, ನಿಮ್ಮ ಆರೋಗ್ಯ ರಕ್ಷಣಾ ಅಗತ್ಯಗಳನ್ನು ಮೌಲ್ಯಮಾಪನ ಮಾಡಿ ಪಾಲಿಸಿ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಿ. ವಿಮಾಯೋಜನೆಯ ಗುಣಲಕ್ಷಣಗಳು ಮತ್ತು ಪ್ರಯೋಜನಗಳನ್ನು ಪರೀಕ್ಷಿಸಿ. ಸರಿಯಾದ ಆರೋಗ್ಯ ವಿಮಾ ಯೋಜನೆ ಆಯ್ಕೆ ಮಾಡುವುದು ಅಗತ್ಯ ಎಂದರು.
ಈಸ್ಟ್ ಅಧ್ಯಕ್ಷ ಶೇಷಗಿರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್. ಮನೋಹರ, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ಜಿ .ವಿಜಯ್ ಕುಮಾರ್, ಮಾಜಿ ಅಧ್ಯಕ್ಷ ಆದಿಮೂರ್ತಿ ಎಚ್.ಬಿ., ಗಣೇಶ್.ಎಸ್, ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಎಚ್.ಎಂ ಮಧು, ಕೃಷ್ಣಮೂರ್ತಿ, ಬಿ.ಸತೀಶ್ ಚಂದ್ರ, ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್. ಧನಂಜಯ್, ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್, ಸಂಜೀವ್ ಎಸ್.ಎನ್, ಅಜಿತ್ ಎಚ್.ಎಸ್, ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಹೊಸ ಸದಸ್ಯ ಗುರುಮೂರ್ತಿ ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಸದಸ್ಯರು ರೊಟೇರಿಯನ್ಸ್ ಆನ್ಸ್ ಉಪಸ್ಥಿತರಿದ್ದರು.


