ಆಂದ್ರಪ್ರದೇಶ :- ನಿಮಗೆ ಪರಿಚಯದ ಕಾಲೇಜು ಹುಡುಗರಿಗೆ ಬೇಕಾದರೆ ಬುದ್ಧಿವಾದ ಹೇಳಿ, ಆದರೆ ಹೈಸ್ಕೂಲು ವಿದ್ಯಾರ್ಥಿಗಳಿಗೆ ಮಾತ್ರ ಬುದ್ಧಿ ಹೇಳಲು ಹೋಗಬೇಡಿ. ಯಾಕೆ ಗೊತ್ತ?
ಕ್ಯಾಂಪಸ್ ಗಳಲ್ಲಿ ಡ್ರಗ್ ಮಾಫಿಯಾ ಹಳೆಯ ಕತೆಯಾಯಿತು, ಈಗ ಶಾಲಾಮಕ್ಕಳಿಗೂ ಸುಲಭವಾಗಿ ಗಾಂಜಾ ಸಿಗುತ್ತದೆ, ತುಂಬಾ ಜನ ನಶೆಯ ದಾಸರಾಗಿದ್ದಾರೆ.
ಗಾಂಜಾ ನಶೆಯ ವಿದ್ಯಾರ್ಥಿಗಳೆನಿಸಿಕೊಂಡಿರುವ ಈ ದುಷ್ಟರು ಆಂಧ್ರ ಪ್ರದೇಶದ ಒಂಗೋಲ್ ಜಿಲ್ಲೆಯ ತಮ್ಮ ಶಾಲೆಯ ಹೆಡ್ ಮೇಡಂ ಅನ್ನೇ ಕೊಲೆ ಮಾಡಿದ್ದಾರೆ.
ಗಾಂಜಾ ಚಟ ಬಿಡಿ ಎಂದದ್ದೇ ತಪ್ಪಾಯಿತೆ…
ಗಾಂಜಾ ಚಟ ಬಿಡುವಂತೆ ಬುದ್ಧಿವಾದ ಹೇಳಿದರಲ್ಲದೆ ಅವರ ಚಟುವಟಿಕೆಗಳನ್ನು ವಿಡಿಯೋ ಮಾಡಿಕೊಂಡರು ಎಂಬ ಕಾರಣಕ್ಕೆ ಇವರು ಈ ಕೃತ್ಯ ಎಸಗಿದ್ದಾರೆ.
ಶಾಲಾ ಶುಲ್ಕದ ಬ್ಯಾಗ್ ತರುವುದನ್ನು ಗಮನಿಸಿ, ಕಾಂಪೌಂಡ್ ದಾಟಿ ಮನೆ ನುಗ್ಗಿ ತಮ್ಮ ಹೆಡ್ ಮೇಡಂ ಅನ್ನೇ ಇಪ್ಪತ್ತೇಳು ಸಲ ಚಾಕುವಿನಿಂದ ಚುಚ್ಚಿ ಕೊಂದು, ಎರಡು ಲಕ್ಷ ಹಣ ಮತ್ತು ಮೊಬೈಲ್ ನೊಂದಿಗೆ ಪರಾರಿ ಆಗಿದ್ದಾರೆ.
ಕೊಲೆಗೆ ಇವರು ಪಕ್ಕಾ ಸಂಚು ಮಾಡಿದ್ದಾರೆ, ಮಾಸ್ಕ್ ಮತ್ತು ಹ್ಯಾಂಡ್ ಗ್ಲೋವ್ಸ್ ಹಾಕಿಕೊಂಡಿದ್ದಾರೆ. ಸಿ.ಸಿ.ಕೆಮೆರಾದಲ್ಲೂ ಇವರ ಗುರುತು ಸಿಕ್ಕಿರಲಿಲ್ಲ. ಪೋಲೀಸರು ಇವರೇ ಆರೋಪಿಗಳೆಂದು ನಿರ್ಧರಿಸಲು ಒಂದು ವಾರ ಸಮಯ ತೆಗೆದುಕೊಂಡಿದೆ.


