<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ದಸರಾ ಉತ್ಸವ ನಿಮಿತ್ತ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತಯ ಗೋಷ್ಠಿ

Banner Ad
ದಸರಾ ಉತ್ಸವ ನಿಮಿತ್ತ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತಯ ಗೋಷ್ಠಿ

ಶಿವಮೊಗ್ಗ :- ಮಹಾನಗರ ಪಾಲಿಕೆಯು ಈ ಬಾರಿ ಅದ್ದೂರಿಯಿಂದ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಅದರ ನಿಮಿತ್ತ ಸೆ. 26ರಂದು ಅಂಬೇಡ್ಕರ್ ಭವನದಲ್ಲಿ ಸಂಜೆ 5.30ಕ್ಕೆ ನಡೆಯುವ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಪದವಿ ಪೂರ್ವ ಕಾಲೇಜು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಫರ್ದೆಯನ್ನು ಏರ್ಪಡಿಸಿದೆ.

ಆಸಕ್ತರು ನಾಡಹಬ್ಬದಿಂದ ಭಾವೈಕ್ಯತೆ ವಿಚಾರವಾಗಿ ಎರಡು ಪುಟಗಳಿಗೆ ಮೀರದಂತೆ ಒಂದು ಪ್ರಬಂಧವನ್ನು ಬರೆದು ಕಳುಹಿಸ ಬೇಕು. ಸಾರ್ವಜನಿಕರ ವಿಭಾಗ ಮತ್ತು ವಿದ್ಯಾರ್ಥಿಗಳ ವಿಭಾಗಕ್ಕೆ ಪ್ರತ್ಯೇಕವಾಗಿ ಬಹುಮಾನವಿರುತ್ತದೆ. ಭಾಗವಹಿಸಿದವರಿಗೆಲ್ಲ ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡಿನಲ್ಲಿ ನಾಡ ದೇವತೆಯ ಚಿತ್ರವನ್ನು ಬರೆಯುವ ಸ್ಫರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಅಂಚೆ ಕಾರ್ಡಿನಲ್ಲಿ ನಾಡದೇವತೆ ಭುವನೇಶ್ವರಿಯ ಚಿತ್ರವನ್ನು ಬರೆದು ಕಳುಹಿಸಬಹುದು. ಅದೇ ರೀತಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಕವನಗಳನ್ನು ಕಳುಹಿಸಲು ಕೋರಿದೆ. ಆಯ್ಕೆಯಾದ ಕವಿಗಳಿಗೆ ದೂರವಾಣಿ ಮೂಲಕ ತಿಳಿಸಲಾಗುವುದು.

ಸೆ. 20ರೊಳಗೆ ತಲುಪುವಂತೆ ಎಂ.ಎನ್. ಸುಂದರ ರಾಜ್, ಪ್ರಶಾಂತ್, ಬ್ಯಾಂಕ್ ಕಾಲೋನಿ, ಶರಾವತಿನಗರ, ಶಿವಮೊಗ್ಗ ಇಲ್ಲಿಗೆ ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಪ್ರಬಂಧ,ಕವಿತೆ, ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ದಸರಾ ಸಾಹಿತ್ಯ ಗೋಷ್ಠಿಯ ಸಂಚಾಲಕರಾದ ಎಂ.ಎನ್. ಸುಂದರರಾಜ್ ತಿಳಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *