ಶಿವಮೊಗ್ಗ:- ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಸದರಿ ವರದಿಯಲ್ಲಿ ಸೇರ್ಪಡೆಗೊಂಡಿರುವ ಗಾಜನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಿವನಂಜಪ್ಪ ಮತ್ತು ಹರಿಕೃಷ್ಣ ಮತ್ತೂರು ನೇತೃತ್ವದಲ್ಲಿ ಸೆ. 10 ಮತ್ತು 11ರಂದು ಎರಡು ದಿನಗಳ ಬೃಹತ್ ಪಾದಯಾತ್ರೆ- ಜನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮತ್ತೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಈ ವರದಿಗೆ ಸಂಬಂಧಿಸಿದಂತೆ ಈಗ ಸರ್ಕಾರ 7ನೇ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ಮಲೆನಾಡಿನಲ್ಲಿ ಬಹಳ ಗೊಂದಲ, ಆತಂಕ ಉಂಟಾಗಿದೆ. ಈ ಭಾಗದ ರೈತರ, ಸಾರ್ವಜನಿಕರ ಅಹವಾಲು, ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಇಲ್ಲ ವಾಗಿವೆ ಎಂದು ಆಕ್ರೋಶ ವ್ಯಕ್ತಪ ಡಿಸಿದ ಅವರು, ಗಾಜನೂರು ಗ್ರಾಮ ಪಂಚಾಯತಿ ಕ್ಷೇತ್ರದ 10-15 ಹಳ್ಳಿಗಳನ್ನು ವಲಯ ಎಂದು ಗುರುತಿಸಿರುವುದು ಈ ಭಾಗದ ರೈತರ, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ ಎಂದರು.
ಮುಳುಗಡೆ ಸಂತಸ್ತರನ್ನು ಅಂದಿನ ಸರ್ಕಾರವೇ 1963ರಲ್ಲೇ ಈ ಪ್ರದೇಶಗಳಿಗೆ ತಂದು ಹಾಕಿತು. ತದ ನಂತರ ಸರ್ಕಾರಗಳು ಅರಣ್ಯ, ವನ್ಯಜೀವಿಗೆ ಸಂಬಂಧಿಸಿದಂತೆ ಹತ್ತಾರು ಕಾನೂನುಗಳನ್ನು ಇವರ ಮೇಲೆ ಹೇರಿತು. ಆದರೂ ಇಲ್ಲಿಯ ಜನ ಹಾಗೂ ಹೀಗೂ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತ ಬಂದಿದ್ದಾರೆ. ಈಗ ಏಕಾ ಏಕಿ ರಾಜ್ಯ ಸರ್ಕಾರ 1926ರ ಬ್ರಿಟಿಷ್ ಕಾನೂನಿನ ಪ್ರಕಾರ ಈ ಭಾಗ ಅರಣ್ಯ ಇಲಾಖೆಯದ್ದೆಂದು ಹೇಳಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಮೊದಲು ರೈತರ ಹಕ್ಕು ಪ್ರತಿಷ್ಠಾಪಿಸಿ ಎಂದು ಒತ್ತಾಯಿಸಿದರು.
ಅರಣ್ಯ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯ ಬೇಕು. ಮಾತಿಗೋಸ್ಕರ ರಾಜಕೀಯ ಹೇಳಿಕೆಗಳು ಬೇಡ. ಅರಣ್ಯ -ಕಂದಾಯ ಇಲಾಖೆಗಳ ನಡುವಿನ ಸಂಘರ್ಷವೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ಹಾಲಿ ಸಾಗುವಳಿ ಮಾಡುತ್ತಿರುವ ರೈತರು, ಸಾರ್ವಜನಿಕರನ್ನು ಆ ಭಾಗದ ವಾರಸುದಾರರು ಅಂತಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು ಡಾ.ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ 3 ದಿನಗಳ ವಿಶೇಷ ಅಧಿವೇಶನ ಕರೆದಿದ್ದು ಸ್ವಾಗತಾರ್ಹ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕರಾದ ಆರ್.ಕೆ.ಸಿದ್ರಾಮಣ್ಣ, ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾ ಧ್ಯಕ್ಷ ಎನ್.ಕೆ. ಜಗದೀಶ್, ಇನ್ನಿತ ರರು ಪಾದಯಾತ್ರೆ ಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ಗಾಜನೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷಕುಮಾರ ಬಿ.ಗೌಡ, ಪ್ರಮುಖರಾದ ಗಣೇಶ್ ಬೀಳಗಿ, ರಾಜೇಶ್, ಕುಮಾರ ಗಾಜ ನೂರು, ಮಂಜುನಾಥ ನವುಲೆ, ಚಂದ್ರಶೇಖರ್ ಇದ್ದರು.


