<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಹೆಚ್.ಸಿ. ಯೋಗೀಶ್ ಅವರಿಗೆ ಪೈಪೋಟಿ ನಡುವೆಯೂ ಒಲಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ

Banner Ad
ಹೆಚ್.ಸಿ. ಯೋಗೀಶ್ ಅವರಿಗೆ ಪೈಪೋಟಿ ನಡುವೆಯೂ ಒಲಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ

ಶಿವಮೊಗ್ಗ :- ಪೈಪೋಟಿಗಳ ನಡುವೆಯೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರ್ ಅವರ ಪುತ್ರ, ಮಾಜಿ ಪಾಲಿಕೆ ಸದಸ್ಯರೂ ಆದ ಹೆಚ್.ಸಿ. ಯೋಗೀಶ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ತಿಳಿಸಿದ್ದಾರೆ.

ಘಟಾನುಘಟಿಗಳ ಪೈಪೋಟಿಯ ನಡುವೆಯೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಸ್ಥಾನ ಸ್ಥಾನ ಯೋಗೀಶ್ ಅವರಿಗೆ ದೊರಕಿದೆ. ಈ ರೇಸ್ ನಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಜಿಲ್ಲಾ ಅಧ್ಯಕ್ಷರುಗಳು ಇದ್ದರು. ಈ ನಡುವೆ ಯುವ ನಾಯಕ ಹೆಚ್.ಸಿ.ಯೋಗೇಶ್ ಅವರಿಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ.

ಸಂಘಟನ್ ಸೃಜನ್ ಅಭಿಯಾನದ ಅಡಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಎಐಸಿಸಿ ಮತ್ತು ಕೆಪಿಸಿಸಿಯ ವೀಕ್ಷಕರು ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಇನ್ನು, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇವುಗಳನ್ನು ಪರಿಶೀಲಿಸಿ ಟಾಪ್ ೬ಮಂದಿಯ ಹೆಸರನ್ನು ಪಕ್ಷದ ಪದಾಧಿಕಾರಿಗಳಿಗೆ ವೀಕ್ಷಕರು ಲಕೋಟೆಯಲ್ಲಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಪರಿಶೀಲನೆ ನಡೆಸಿ ಕೊನೆಗೆ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ.

ಯೋಗೇಶ್ ಅವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಪಾಲಿಕೆ ಸದಸ್ಯರಾಗಿಯು ಅನುಭವವಿದೆ. ಹಾಗಾಗಿ ಸಂಘಟನೆ ಮತ್ತು ಆಡಳಿತ ಎರಡರ ತಿಳುವಳಿಕೆ ಯೋಗೇಶ್ ಅವರಿಗಿದೆ. ಜಿಲ್ಲಾ ಕಾಂಗ್ರೆಸ್ನಲ್ಲಿ ಬಣಗಳ ಸಂಖ್ಯೆ ದೊಡ್ಡದಿದೆ. ವೈಮನಸ್ಸು ಹೊಂದಿರುವವರನ್ನು ಒಗ್ಗೂಡಿಸಿ ಪಕ್ಷದ ಸಂಘಟನೆ ಮಾಡುವುದು ದೊಡ್ಡ ಸವಾಲು ಯೋಗೀಶ್ ಅವರ ಮುಂದಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *