<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದ ಜೆ.ಎನ್.ಎನ್.ಸಿ.ಇಗೆ ವಿಟಿಯು 8 ರ‍್ಯಾಂಕ್‌ಗಳ ಗರಿಮೆ

Banner Ad
ಶಿವಮೊಗ್ಗದ ಜೆ.ಎನ್.ಎನ್.ಸಿ.ಇಗೆ ವಿಟಿಯು 8 ರ‍್ಯಾಂಕ್‌ಗಳ ಗರಿಮೆ

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್‌ ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, ನಗರದ ಜೆ.ಎನ್.ಎನ್ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 8 ರ‍್ಯಾಂಕ್‌ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಧನ್ಯಶ್ರೀ.ಬಿ.ಎಂ. ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸುವುದರೊಂದಿಗೆ 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ಹರ್ಷಿಕ.ಎನ್ (4ನೇ ರ‍್ಯಾಂಕ್‌) ಪಡೆದಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ನಯ್ಯರ್ ಫಾತೀಮ ಅಫ್ರಿನ್ (3ನೇ ರ‍್ಯಾಂಕ್‌), ಯಶಸ್ಕರ.ಟಿ.ಜಿ. (4ನೇ ರ‍್ಯಾಂಕ್‌), ಭೂಮಿಕ.ಎಂ. (5ನೇ ರ‍್ಯಾಂಕ್‌), ಜಾರ್ಜ್.ಟಿ.ಪೌಲ್ (6ನೇ ರ‍್ಯಾಂಕ್‌), ನಿತ್ಯಶ್ರೀ ಹೆಗಡೆ.ಕೆ.ಎನ್. (8ನೇ ರ‍್ಯಾಂಕ್‌) ಹಾಗೂ ಸ್ವಾತಿ.ಎಸ್.ಜಿ. (10ನೇ ರ‍್ಯಾಂಕ್‌) ಪಡೆದಿದ್ದಾರೆ.

ಈ ಸಾಧನೆಯು ವಿದ್ಯಾಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಬೋಧನೆ ಹಾಗೂ ವಿದ್ಯಾರ್ಥಿಗಳ ನಿರಂತರ ಪರಿಶ್ರಮಕ್ಕೆ ಸಿಕ್ಕ ಮತ್ತೊಂದು ಪ್ರತಿಷ್ಠಿತ ಮನ್ನಣೆಯಾಗಿದೆ ಎಂದು ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ತಿಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *