ಶಿವಮೊಗ್ಗ :- ಬಾಳೆಹೊನ್ನೂರಿ ನಿಂದ ಸೆರೆಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗಿದ್ದ ೩೨ ವಷದ ಶೌರ್ಯ ಆನೆ ಮೃತಪಟ್ಟಿದ್ದು, ಆನೆಗಳ ಲಾಲನೆ-ಪಾಲನೆ ಹಾಗೂ ವೈದ್ಯಕೀಯ ನಿರ್ವಹಣೆ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಬಾಳೆಹೊನ್ನೂರು ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಶೌರ್ಯ ಆನೆಯನ್ನು ಏಪ್ರಿಲ್‌ನಲ್ಲಿ ಖೆಡ್ಡಾಕ್ಕೆ ಬೀಳಿಸಿ ಸೆರೆಡಿಯಲಾಗಿತ್ತು. ಬಳಿಕ ಅದನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಪಳಗಿಸುವ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಇದೀಗ ಶೌರ್ಯ ಮೃತಪಟ್ಟಿರುವ ನ್ನೆಲೆಯಲ್ಲಿ ಆನೆಯ ಆರೋಗ್ಯದ ಮೇಲ್ವಿಚಾರಣೆ, ಚಿಕಿತ್ಸೆ ಹಾಗೂ ಶಿಬಿರದ ನಿರ್ವಹಣೆ ಕುರಿತು ಪ್ರಶ್ನೆಗಳು ಎದ್ದಿವೆ.
ಶೌರ್ಯನ ಸಾವಿನಿಂದ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಆನೆಗಳ ಸಂಖ್ಯೆ ೨೪ರಿಂದ ೨೩ಕ್ಕೆ ಇಳಿದಿದೆ. ಈ ಹಿಂದೆ ಕೂಡ ಶಿಬಿರದಲ್ಲಿ ಹಲವು ಆನೆಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಆನೆಗಳ ಆರೋಗ್ಯ ರಕ್ಷಣೆ ಮತ್ತು ನಿರ್ವಹಣಾ ವ್ಯವಸ್ಥೆಯ ಬಗ್ಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ.


