<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ವೈಭವದ ಶಿವಮೊಗ್ಗ ದಸರಾ ಆಚರಣೆಗೆ ಕ್ಷಣಗಣನೆ : ಶಾಸಕ ಚನ್ನಬಸಪ್ಪ ಏನೆಲ್ಲಾ ವಿವರಣೆ ನೀಡಿದರು, ಇಲ್ಲಿದೆ ಕಂಪ್ಲೀಟ್ ಪಿಕ್ಚರ್…

Banner Ad
ವೈಭವದ ಶಿವಮೊಗ್ಗ ದಸರಾ ಆಚರಣೆಗೆ ಕ್ಷಣಗಣನೆ : ಶಾಸಕ ಚನ್ನಬಸಪ್ಪ ಏನೆಲ್ಲಾ ವಿವರಣೆ ನೀಡಿದರು, ಇಲ್ಲಿದೆ ಕಂಪ್ಲೀಟ್ ಪಿಕ್ಚರ್…

ಶಿವಮೊಗ್ಗ :- ಶಿವಮೊಗ್ಗ ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟ್ಟು ವೈಭವ ಹಾಗೂ ವಿಭಿನ್ನ ಕಾರ್‍ಯಕ್ರಮ ಗಳೊಂದಿಗೆ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಜ್ಜಾಗಿದೆ. ಈ ಬಾರಿ ಮತ್ತಷ್ಟು ವಿಜೃಂಭಣೆ ಯಿಂದ ದಸರಾ ಆಚರಿಸುತ್ತಿದ್ದು, ಇದಕ್ಕಾಗಿ 14 ಸಮಿತಿಗನ್ನು ರಚಿಸ ಲಾಗಿದೆ. ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಚಿನ್ನದ ಮುಖವಾಡ ಹಾಕಲು, ಪಾಲಿಕೆ ಕಟ್ಟಡಕ್ಕೆ ಲೇಸರ್ ಬೆಳಕು, ಹೊಸದಾಗಿ ನಾಣ್ಯ ದಸರಾ ಸೇರ್ಪಡೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಅ. 11ರಂದು ಮಹಾನಗರ ಪಾಲಿಕೆ ಆವರಣದಿಂದ ಶ್ರೀ ಚಾಮುಂಡೇ ಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಕೋಟೆಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಇದೇ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಎಂದರು. ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಶಾಸಕರು ಹಾಗೂ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮಾಹಿತಿ ನೀಡಿದರು.

ದಸರಾ ಉದ್ಘಾಟನಾ ಕಾರ್‍ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಶ್ರೀನಾಥ್ ಅವರು ಆಗಮಿಸಲಿದ್ದಾರೆ. ಅವರ ಉಪಸ್ಥಿತಿಯು ದಸರಾ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಮೆರುಗು ತರಲಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲು ಸಿದ್ಧತೆ ನಡೆದಿದೆ ಎಂದರು.

ಮೆರವಣಿಗೆಗೆ ಗಜವೈಭವ : ಸಕ್ರೆಬೈಲ್‌ನ ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿದ್ದು, ಮೆರವಣಿಗೆಯು ಮತ್ತಷ್ಟು ಆಕಷಣೆಯಾಗಲಿದೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ವಿವರಿಸಿದರು. ಈ ಬಾರಿ ದೇವಿಯ ಮುಖವಾಡ ವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಈ ಬಾರಿ ಒಟ್ಟು ೬ಚಿನ್ನದ ಬಳೆಗಳನ್ನು ಚಾಮುಂಡೇಶ್ವರಿ ದೇವಿಗೆ ಅರ್ಪಿಸ ಲಾಗುವುದು ಎಂದರು.

೧೧ದಿನಗಳದಸರಾ ಸಂಭ್ರಮ: ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ 10 ದಿನಗಳ ಕಾಲ ನಡೆಯುತ್ತಿದ್ದ ನವರಾತ್ರಿ ಹಾಗೂ ವಿಜಯದಶಮಿ ಉತ್ಸವವನ್ನು ಹೆಚ್ಚುವರಿ ಒಂದು ದಿನ ವಿಸ್ತರಿಸ ಲಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ನಗರದಾದ್ಯಂತ ದಸರಾ ಸಂಭ್ರಮವನ್ನು ಮತ್ತಷ್ಟ್ಟು ವೈಭವಯುತವಾಗಿ ಆಚರಿಸಲು ಸಿದ್ಧತೆ ನಡೆದಿದೆ ಎಂದರು.

ಕೋಟೆ ರಸ್ತೆ ಶಿವಪ್ಪನಾಯಕ ಅರಮನೆಯಿಂದ ದೇವಾನು ದೇವತೆಗಳ ಮೆರವಣಿಗೆ :

ಶಿವಮೊಗ್ಗ ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಿಂದ ಸಕಲ ದೇವಾನುದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ. 200ಕ್ಕೂ ಹೆಚ್ಚು ವಿವಿಧ ದೇವಾಲಯಗಳ ದೇವರುಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಇದು ರಾಜ್ಯದಲ್ಲೇ ವಿಶೇಷವಾಗಿದೆ. ದಸರಾ ಸಂಭ್ರಮಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ವಿಜಯದಶಮಿ ಸಂಭ್ರಮಕ್ಕೆ ಜನಸಾಗರದ ನಿರೀಕ್ಷೆ :

ಶಿವಮೊಗ್ಗದಲ್ಲಿ ನಡೆಯಲಿರುವ ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಸಂಭ್ರಮಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜಯ ದಶಮಿ ಉತ್ಸವ ನಡೆಯಲಿದ್ದು, ಈ ಬಾರಿ ಬಾಣ ಬಿರುಸುಗಳ ಪ್ರದರ್ಶನ ದೊಂದಿಗೆ ಲೇಸರ್ ಶೋ ಸಹ ಇರುವುದಾಗಿ ತಿಳಿಸಿದರು.

ರಾಜ ಮಹರಾಜರ ಕಾಲದ ಪುರಾತನ ನಾಣ್ಯ ಪ್ರದರ್ಶನ:

ಶಿವಮೊಗ್ಗ ದಸರಾ ಅಂಗವಾಗಿ ವೀರಶೈವ ಕಲ್ಯಾಣ ಮಂದಿರದಲ್ಲಿ ರಾಜ ಮಹರಾಜರ ಕಾಲದ ನಾಣ್ಯ ಮತ್ತು ಅಂಚೆ ಚೀಟಿಗಳ ಸಂಗ್ರಹ ಪ್ರದರ್ಶನ ಆಯೋಜಿಸಲಾಗಿದೆ. ಪುರಾತನ ನಾಣ್ಯ ಸಂಗ್ರಹದಲ್ಲಿ ಆಸಕ್ತಿ ಹೊಂದಿರು ವವರನ್ನು ಗುರುತಿಸಿ, ಅವರ ಅಪರೂಪದ ಹಾಗೂ ವೈವಿಧ್ಯಮಯ ನಾಣ್ಯ ಸಂಗ್ರಹವನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಕಾರ್ಯ ಕ್ರಮವನ್ನು ಅ. 17ರಂದು ಶನಿವಾರ ಬೆಳಿಗ್ಗೆ 11ಗಂಟೆಗೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದರು.

ಅ. 20: ರವಿಚಂದ್ರನ್‌ರಿಂದ ಸಾಂಸ್ಕೃತಿಕ ಸಂಭ್ರಮ : ಶಿವಮೊಗ್ಗ ದಸರಾ ಅಂಗವಾಗಿ ಅ. 20 ರಂದು ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಖ್ಯಾತ ಚಲನಚಿತ್ರ ನಟ ರವಿಚಂದ್ರನ್ ಅವರು ಭಾಗವಹಿಸ ಲಿದ್ದಾರೆ. ಯುವ ದಸರಾದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ರವಿಚಂದ್ರನ್ ಅವರ ಉಪಸ್ಥಿತಿಯಲ್ಲಿ ಮತ್ತಷ್ಟು ಮೆರುಗು ತರಲಿದೆ. ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಪಾಲಿಕೆ ಕಟ್ಟಡಕ್ಕೆ ವಿಶೇಷ ಅಲಂಕಾರ : ಶಿವಮೊಗ್ಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಕಟ್ಟಡಕ್ಕೆ ಹಾಗೂ ಆವರಣದಲ್ಲಿ ಲೇಸರ್ ಶೋನ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ ಎಂದರು. ಒಟ್ಟಾರೆ, ಈ ಬಾರಿ ಶಿವಮೊಗ್ಗ ದಸರಾವನ್ನು ಸಾಂಸ್ಕೃತಿಕ ವೈಭವ, ಧಾರ್ಮಿಕ ಆಚರಣೆ, ಮನರಂಜನೆ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯ ಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ ಎಂದು ಶಾಸಕ ಚನ್ನಬಸಪ್ಪ ಅವರು ತಿಳಿಸಿದರು. ಪತ್ರಿಕಾಗೋಷ್ಟಿ ಯಲ್ಲಿ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *