<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯ ಆವರಣದಲ್ಲಿ ರಾಮನವಮಿ ಉತ್ಸವ…

Banner Ad
ಶಿವಮೊಗ್ಗ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯ ಆವರಣದಲ್ಲಿ ರಾಮನವಮಿ ಉತ್ಸವ…

ಶಿವಮೊಗ್ಗ :- ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿ ಉತ್ಸವದ ಭಾಗವಾಗಿ ಪ್ರತಿ ದಿನ ಸಂಜೆ 6.30ಕ್ಕೆ ವಿವಿಧ ಧಾರ್ಮಿಕ-ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದೇವರಿಗೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

ಮಾ. 21ರ ನಾಳೆ ಕಗ್ಗ ಖ್ಯಾತಿಯ ನಟೇಶ್‌ರವರಿಂದ ಸೀತಾ ಪರಿತ್ಯಾಗ – ಉಪನ್ಯಾಸ, ದೇವರಿಗೆ ಅಹಲ್ಯಾ ಶಾಪ ವಿಮೋಚನೆ ಅಲಂಕಾರವಿದೆ. ಮಾ. 22ರ ಭಾನುವಾರ ನಾಗಶ್ರುತಿ ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಸೀತಾ ಕಲ್ಯಾಣ ಅಲಂಕಾರವಿದೆ. ಮಾ. 23ರ ಸೋಮವಾರ ನಡೆಯುವ ಮುದ್ರಿಕಾ ಪ್ರದಾನ ಗಮಕ ವಾಚನದಲ್ಲಿ, ಡಾ. ಸನತ್ ಕುಮಾರ್‌ರವರಿಂದ ವಾಚನ, ಅಚ್ಯುತ ಅವಧಾನಿಯವರಿಂದ ವ್ಯಾಖ್ಯಾನ ನಡೆಯಲಿದೆ. ದೇವರಿಗೆ ಗುಹಾತಿಥ್ಯ ಅಲಂಕಾರವಿದೆ. ಮಾ. 24ರ ಮಂಗಳವಾರ ಸಂಭ್ರಮ ಮತ್ತು ತಂಡದವರಿಂದ ಕರ್ನಾಟಕ ಶಾಸೀಯ ಸಂಗೀತವಿದ್ದು, ದೇವರಿಗೆ ಕಬಂಧ ಬಾಹು ವಧೆ ಅಲಂಕಾರವಿದೆ. ಮಾ. 25ರ ಬುಧವಾರ ನಾದ ಸಂಭ್ರಮ ಕಾರ್ಯಕ್ರಮವಿದ್ದು, ದೇವರಿಗೆ ಶಬರಿ ಅತಿಥ್ಯ ಅಲಂಕಾರವಿದೆ. ಮಾ. 26ರ ಗುರುವಾರ ಶೃಂಗೇರಿ ಹೆಚ್. ಎಸ್. ನಾಗರಾಜ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವಿದ್ದು, ದೇವರಿಗೆ ವಿಭೀಷಣ ಶರಣಾಗತಿ ಅಲಂಕಾರವಿದೆ. ಮಾ. 27ರ ಶುಕ್ರವಾರ ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, ಸಂಜೆ 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ, ಮಾ. 28ರ ಶನಿವಾರ ಸಂಜೆ 7ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 5 ರಿಂದ ವಿವಿಧ ಭಜನಾ ಮಂಡಳಿ ವತಿಯಿಂದ ಸಂಜೆ ಭಜನಾ ಕಾರ್ಯಕ್ರಮವಿದ್ದು, ರಾತ್ರಿ ವಸಂತ ಸೇವೆ (ಪಾನಕ, ಕೋಸಂಬರಿ) ವಿತರಣೆ ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

 

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *