<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಖ್ಯಾತ ಹಿರಿಯ ಚಲನ ಚಿತ್ರ ನಟ ಶ್ರೀನಾಥ್ ರಿಂದ10 ದಿನಗಳ ‘ನಾಡಹಬ್ಬ ದಸರಾ ಉದ್ಘಾಟನೆ

Banner Ad
ಖ್ಯಾತ ಹಿರಿಯ ಚಲನ ಚಿತ್ರ ನಟ ಶ್ರೀನಾಥ್ ರಿಂದ10 ದಿನಗಳ ‘ನಾಡಹಬ್ಬ ದಸರಾ ಉದ್ಘಾಟನೆ

ಶಿವಮೊಗ್ಗ :- ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಈ ಬೃಹತ್ ದಸರಾ ಮಹೋತ್ಸವವನ್ನು ಖ್ಯಾತ ಹಿರಿಯ ಚಲನಚಿತ್ರ ನಟ ಶ್ರೀನಾಥ್ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಮಹೋತ್ಸವವು ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತವಾಗಿರದೆ, ಸಮಗ್ರ ಜಿಲ್ಲೆಯ ಸಮಸ್ತ ಜನತೆಗೆ ಹರ್ಷ, ಸಡಗರ ಹಾಗೂ ಆನಂದವನ್ನು ಪಸರಿಸುವ ಜನಪರ ನಾಡಹಬ್ಬವಾಗಿದೆ. ನಮ್ಮ ಪರಂಪರೆಯ ಶಕ್ತಿ, ಸಾಮರಸ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಸಾಂಸ್ಕೃತಿಕ ಪರ್ವದಲ್ಲಿ ನಗರದ ಸಮಸ್ತ ನಾಗರಿಕರು, ಕಲಾ ರಸಿಕರು, ಮಾತೆಯರು ಹಾಗೂ ಯುವಮಿತ್ರರು ಕುಟುಂಬ ಸಮೇತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸೂಡಾ ಅಧ್ಯಕ್ಷ ಮಧುಸೂದನ್, ಪ್ರಮುಖರಾದ ಚೇತನ್, ಹೆಚ್.ಸಿ. ಯೋಗೀಶ್, ಮಾಯಣ್ಣ ಗೌಡ, ನಾಗರಾಜ ಕಂಕಾರಿ, ಪಾಲಾಕ್ಷಿ, ಧೀರರಾಜ್ ಇನ್ನಿತರರು ಪಾಲ್ಗೊಂಡಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *