<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕಂಪ್ಯೂಟರ್ ಸೈನ್ಸ್ ಪದವೀಧರರು ನೈಜ ಜಗತ್ತಿನ ಸಮಸ್ಯೆಗಳಿಗೆ ನವೀನತೆಯ ಪರಿಹಾರ ನೀಡುವಂತವರಾಗಿ : ನಾಗರಾಜ್

Banner Ad
ಕಂಪ್ಯೂಟರ್ ಸೈನ್ಸ್ ಪದವೀಧರರು ನೈಜ ಜಗತ್ತಿನ ಸಮಸ್ಯೆಗಳಿಗೆ ನವೀನತೆಯ ಪರಿಹಾರ ನೀಡುವಂತವರಾಗಿ : ನಾಗರಾಜ್

ಶಿವಮೊಗ್ಗ:- ಭವಿಷ್ಯದಲ್ಲಿ ಅನೇಕ ಉದ್ಯೋಗಗಳನ್ನು ಯಂತ್ರಗಳೇ ನಿರ್ವಹಿಸಲಿದ್ದು, ಕಂಪ್ಯೂಟರ್ ಸೈನ್ಸ್ ಪದವೀಧರರು ಕೇವಲ ಉದ್ಯೋಗ ಅರಸುವವರಾಗದೆ, ನೈಜ ಜಗತ್ತಿನ ಸಮಸ್ಯೆಗಳಿಗೆ ನವೀನತೆಯ ಪರಿಹಾರ ನೀಡುವವರಾಗಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ  ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ‘ಮಂಥನ -2026’ ಉದ್ಘಾಟಿಸಿ ಮಾತನಾಡಿದರು.
ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವುದೇ ಕಲಿಕೆಯ ನಿಜವಾದ ಪರೀಕ್ಷೆ. ಈ ಹಿನ್ನಲೆಯಲ್ಲಿ ಹ್ಯಾಕಥಾನ್, ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳನ್ನು ಪರೀಕ್ಷಿಸಲು, ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಸೃಜನಶೀಲ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗಿವೆ.
ಫೇಸ್‌ಬುಕ್‌ನ ‘ಲೈಕ್’ ಚಿಹ್ನೆಯಂತಹ ಜನಪ್ರಿಯ ಪರಿಕಲ್ಪನೆಗಳೂ ಆಂತರಿಕ ಹ್ಯಾಕಥಾನ್‌ಗಳ ಮೂಲಕ ರೂಪುಗೊಂಡ ಉದಾಹರಣೆಗಳಿವೆ. ಇಂತಹ ಕಾರ್ಯಕ್ರಮಗಳು ನವೀನ ಆಲೋಚನೆಗಳಿಗೆ ಪ್ರಾಯೋಗಿಕ ಮೌಲ್ಯ ದೊರಕಿಸಿಕೊಡುತ್ತವೆ ಎಂದು ತಿಳಿಸಿದರು.

ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ವಿಭಾಗದ ಮುಖ್ಯಸ್ಥ ಡಾ. ಮಂಜುಳಾ  ಮಾತನಾಡಿದರು.

ಗುಜರಾತ್ ಸೇರಿದಂತೆ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಈ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ ಭಾಗವಹಿಸಿವೆ. 24 ಗಂಟೆಗಳ ಕಾಲ ನಡೆಯುವ ಈ ತಾಂತ್ರಿಕ ಸವಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿಶ್ಲೇಷಣಾ ಸಾಮರ್ಥ್ಯ, ತಾರ್ಕಿಕ ಚಿಂತನೆ, ತಂಡದ ಸಹಕಾರ ಹಾಗೂ ನವೀನ ಪರಿಹಾರ ರೂಪಿಸುವ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹50ಸಾವಿರ, ದ್ವಿತೀಯ ಬಹುಮಾನವಾಗಿ ₹25ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹15ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಡಾ. ಸುಷ್ಮಾ ಆರ್.ಬಿ., ಡಾ. ನಮಿತಾ ಎಂ.ವಿ., ಹಿರಿಯ ವಿದ್ಯಾರ್ಥಿ ಮುರಳಿ ವೆಂಕಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *