ಶಿವಮೊಗ್ಗ :- ಇಲ್ಲಿನ ರೈಲ್ವೆಸ್ಟೇಷನ್ ಬಳಿ ನಿಂತ್ತಿದ್ದ ಗೂಡ್ಸ್ ಲಾರಿ ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿ, ಬಾರಿ ಅನಾಹುತ ತಪ್ಪಿದೆ.
ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಅಗ್ನಿಶಾಮಕದಳ ಕೂಡಲೇ ಸ್ಪಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದಲ್ಲೇ ರಸ್ತೆಯುದ್ದಕ್ಕೂ ಹಲವಾರು ಲಾರಿಗಳು ನಿಂತ್ತಿದ್ದವು. ಪ್ರತಿನಿತ್ಯ ಗೂಡ್ಸ್ ರೈಲಿನಿಂದ ಸಾಮಾಗ್ರಿಗಳನ್ನು ಇಳಿಸಲು ಮತ್ತು ಇಲ್ಲಿಂದ ಕಳುಹಿಸಲು ನೂರಾರು ಲಾರಿಗಳು ರೈಲ್ವೇ ನಿಲ್ದಾಣದ ಅಕ್ಕ-ಪಕ್ಕ ನಿಂತಿರುತ್ತವೆ.
ಶೇಷಾದ್ರಿಪುರಂ ರೈಲ್ವೆ ಮೇಲ್ ಸೇತುವೆಯ ಕೆಳಭಾಗದಲ್ಲಿ ನಿಂತ್ತಿದ್ದ ಈ ಲಾರಿ ಸಾಮಗ್ರಿಗಳನ್ನು ತುಂಬಲು ಬಂದಾಗ ಖಾಲಿ ಲಾರಿಯಾಗಿತ್ತು. ಕೆ.ಎ.-೨೫ಬಿ-೦೮೫೫ ಎಸ್‌ಕೆಪಿ ರೋಡ್ ಲೈನ್ಸ್‌ನ ಮಹಮ್ಮದ್ ಆಲಿ ಅವರಿಗೆ ಸೇರಿದ ಲಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿಯ ಮುಂಭಾಗ ಮತ್ತು ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ.


