<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗ ಬಂಟ್ಸ್ ಮಹಿಳಾ ವಿಭಾಗದಿಂದ ಸಾಧಕರಿಗೆ ಸನ್ಮಾನ

Banner Ad
ಶಿವಮೊಗ್ಗ ಬಂಟ್ಸ್ ಮಹಿಳಾ ವಿಭಾಗದಿಂದ ಸಾಧಕರಿಗೆ ಸನ್ಮಾನ

ಶಿವಮೊಗ್ಗ :- ಜಿಲ್ಲಾ ಬಂಟರ ಯಾನೆ ನಾಡವರ ಸಂಘ ಹಾಗೂ ಶಿವಮೊಗ್ಗ ಬಂಟ್ಸ್ ಮಹಿಳಾ ವಿಭಾಗದಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಬಂಟ್ಸ್ ಮಹಿಳಾ ವಿಭಾಗ ಅಧ್ಯಕ್ಷೆ ಪುಷ್ಪಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ವೀಣಾ ಪ್ರಭಾಕರ್ ಶೆಟ್ಟಿ, ಶಶಿಕಲಾ ಶೆಟ್ಟಿ, ನಂದಿನಿ ಶೆಟ್ಟಿ, ದೀಪ್ತಿ ಆರ್. ಶೆಟ್ಟಿ, ಸುವಾಸಿನಿ ಎಸ್. ಶೆಟ್ಟಿರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಬಂಟ್ಸ್ ಮಹಿಳಾ ವಿಭಾಗ ಮತ್ತು ಪ್ರಧಾನ ಘಟಕದ ಪ್ರಭಾವತಿ ಎಸ್. ಶೆಟ್ಟಿ, ವಾತ್ಸಲ್ಯ ಎಸ್. ಶೆಟ್ಟಿ, ಶೃತಿ ಎಂ. ಶೆಟ್ಟಿ, ಕೃಷ್ಣಪ್ಪ ಶೆಟ್ಟಿ, ರಾಜೀವ್ ಶೆಟ್ಟಿ, ಮಹೇಶ್ ಶೆಟ್ಟಿ, ರಾಜ್ ಮೋಹನ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ಪರಮೇಶ್ವರ್ ಶೆಟ್ಟಿ ಇನ್ನಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *