ಶಿವಮೊಗ್ಗ :- ನಿರಂತರ ೩೫ ವರ್ಷಗಳಿಂದ ಸಾರ್ವಜನಿಕರಿಗೆ ಯೋಗ ಆರೋಗ್ಯವನ್ನು ಪ್ರತಿ ನಿತ್ಯ ನೀಡುತ್ತಿರುವ ಯೋಗ ತಜ್ಞರಾದ ಗೋಪಾಲಕೃಷ್ಣ ಎಸ್ ಇವರ ಯೋಗ ಕ್ಷೇತ್ರದ ಸಾಧನೆ ಮತ್ತು ಸೇವೆ ಗುರುತಿಸಿ ಬೆಂಗಳೂರಿನ ಗ್ಲೋಬಲ್ ಯೋಗ ಕಲ್ಯಾಣ್ ಮತ್ತು ಯೋಗ ಯುನಿವರ್ಸಿಟಿ ಆಫ್ ಅಮೇರಿಕನ್ಸ್ ಗುರುತಿಸಿ ಯೋಗ ರತ್ನ-೨೦೨೫ ಎಂಬ ಬಿರುದು ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಯೂನಿವರ್ಸಿಟಿಯ ಡೀನ್ ಉಪಾಧ್ಯಕ್ಷರಾದ ಡಾ. ಎಸ್ ಎಸ್ ಹಿರೇಮಠ್ ಉಪ ಕುಲಪತಿಗಳಾದ ಡಾ. ಯೋಗಿ ದೇವರಾಜ್ ಮತ್ತು ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಗೌರಿ ಗದ್ದೆ ಆಶ್ರಮದ ಶ್ರೀ ವಿನಯ ಗುರೂಜಿ ಅವಧೂತರವರು ಯೋಗ ರತ್ನ ಪ್ರಶಸ್ತಿ ಮತ್ತು ಫಲಕವನ್ನು ನೀಡಿ ಗೌರವಿಸಿದರು.
ಗಣ ರಾಜ್ಯೋತ್ಸವ ಪ್ರಶಸ್ತಿ, ಯೋಗ ಸಾಮ್ರಾಟ್, ಯೋಗ ಪುರುಷೋತ್ತಮ, ಯೋಗ ಜನ ಗಂಗಾ, ಯೋಗ ವೈಭವ, ಅಜಿತಶ್ರೀ ಪುರಸ್ಕಾರ, ರೋಟರಿ ವತಿಯಿಂದ ಎಕ್ಸ್‌ಲೆನ್ಸಿ ಅವಾರ್ಡ್, ಸುವರ್ಣ ಕರ್ನಾಟಕ, ಪತಂಜಲಿ ರತ್ನ ಇನ್ನೂ ಮುಂತಾದ ಪ್ರಶಸ್ತಿ ಪುರಸ್ಕಾ ಪಡೆದಿ ರುವ ಇವರಿಗೆ ಕೇಂದ್ರದ ಯೋಗ ಬಂಧುಗಳು, ವಿಪ್ರಟ್ರಸ್ಟ್, ಶ್ರೀ ಅನ್ನಪೂರ್ಣೇಶ್ವರಿ ಟ್ರಸ್ಟ್, ತಾಲ್ಲೂಕು ಬ್ರಾಹ್ಮಣ ಸಂಘ ಮತ್ತು ಮಾಧ್ಯಮ ದವರು ಅಭಿನಂದಿಸಿದ್ದಾರೆ.


