<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗ ಮುಖ್ಯ ಚಚ್೯ನಲ್ಲಿ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ…

Banner Ad
ಶಿವಮೊಗ್ಗ ಮುಖ್ಯ ಚಚ್೯ನಲ್ಲಿ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ…

ಶಿವಮೊಗ್ಗ :- ನಗರದ ಬಿಹೆಚ್ ರಸ್ತೆಯಲ್ಲಿರುವ ಪ್ರಸಿದ್ದ ಮುಖ್ಯ ಚಚ್೯ನಲ್ಲಿ ಪ್ರಾರ್ಥನೆ ವೇಳೆ ಜೇನುಗಳ ದಾಳಿ ನಡೆದಿದೆ.

ಗುಡ್ ಫ್ರೈಡೆ ದಿನವಾದ ಇಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಪ್ರಾರ್ಥನೆ ನಡೆಸುತ್ತಿದ್ದ ವೇಳೆ, ಚರ್ಚ್ ನ ಹೊರ ಭಾಗದಲ್ಲಿ ಹತ್ತಾರು ಕಡೆ ಜೇನು ಗೂಡುಗಳಿದ್ದು, ಅದರಲ್ಲಿ ಒಂದು ದೊಡ್ಡ್ ಜೇನು ಗೂಡಿನಿಂದ‌ ಜೇನುಗಳು ಏಕಾ ಏಕಿ ದಾಳಿ ನಡೆಸಿದೆ.

ದಾಳಿ ವೇಳೆ ಪ್ರಾರ್ಥಿಸುತ್ತಿದ್ದವರು ಜೇನುಗಳಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರು ಸುಮಾರು ಜನರಿಗೆ ಜೇನು‌ಕಡಿದಿವೆ ಅದರಲ್ಲಿ ನಾಲ್ಕು ಜನರಿಗೆ ಗಂಭೀರವಾಗಿ ಕಚ್ಚಿವೆ ಎಂದು ತಿಳಿದುಬಂದಿದೆ.

ನಂತರ ಜೇನು ನೊಣಗಳು ಕಡಿಮೆಯಾಗಿ ಭಕ್ತರು ನಿಟ್ಟುಸಿರು ಬಿಟ್ಟ್ದಿದ್ದಾರೆ. ಒಟ್ಟಾರೆ ಇಂದು ವಿಶೇಷ ಗುಡ್ ಫ್ರೈಡೆ ದಿನವೇ ಈ ರೀತಿ ಆಗಿದ್ದು, ಒಂದು ಕ್ಷಣ ಜನರಲ್ಲಿ ಆತಂಕ ಮೂಡಿಸಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *