<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಕಟ : ಮೇ 18ರಿಂದ ಮೇ 25ರವರೆಗೆ ಎರಡನೇ ಪರೀಕ್ಷೆ : ಶಿಕ್ಷಣ ಸಚಿವರಿಂದ ಸಂಪೂರ್ಣ ಮಾಹಿತಿ

Banner Ad
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಕಟ : ಮೇ 18ರಿಂದ ಮೇ 25ರವರೆಗೆ ಎರಡನೇ ಪರೀಕ್ಷೆ : ಶಿಕ್ಷಣ ಸಚಿವರಿಂದ ಸಂಪೂರ್ಣ ಮಾಹಿತಿ

ಬೆಂಗಳೂರು :- 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟವಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ರಾಜ್ಯದಲ್ಲಿ 7ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ ೬೨೫ರಲ್ಲಿ ೬೨೫ ಅಂಕ ಪಡೆದವರಾಗಿದ್ದಾರೆ.

ಈ ಬಾರಿಯೂ ಬಾಲಕಿಯರೇ ಮೇಲುಗೈ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ 96.18ರಷ್ಟು ಬಾಲಕಿಯರು, ಶೇ 91.98ರಷ್ಟು ಬಾಲಕರು ಪಾಸಾಗಿದ್ದಾರೆ. 3,92,922 ಬಾಲಕಿಯರ ಪೈಕಿ 3,77,922 ಬಾಲಕಿಯರು ತೇರ್ಗಡೆಯಾಗಿದ್ದಾರೆ. 3,77,287 ಬಾಲಕರ ಪೈಕಿ 3,46,872 ಬಾಲಕರು ತೇರ್ಗಡೆ ಹೊಂದಿದ್ದಾರೆ.

ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSಐಅ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ

ಈ ಬಾರಿ ಎರಡೇ ಪರೀಕ್ಷೆ

ಈ ಬಾರಿ ದ್ವಿತೀಯ ಪಿಯುಸಿಯಂತೆ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಮೇ 18ರಿಂದ ಮೇ 25 ರ ವರೆಗೆ ಎರಡನೇ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳ ಬಗ್ಗೆ ಅತೃಪ್ತಿ ಅಥವಾ ಸಂದೇಹವಿದ್ದಲ್ಲಿ, ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಇದಕ್ಕಾಗಿ ಮಂಡಳಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮರುಎಣಿಕೆ ಮತ್ತು ಮರುಮಲ್ಯಮಾಪನ ಪ್ರಕ್ರಿಯೆಗಳಿಗಾಗಿ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳಿಗೆ ಮಲ್ಯಮಾಪಕರು ಎಷ್ಟು ಅಂಕಗಳನ್ನು ನೀಡಿದ್ದಾರೆ ಮತ್ತು ಯಾವುದೇ ಉತ್ತರ ಮಲ್ಯಮಾಪನವಾಗದೆ ಉಳಿದಿದೆಯೇ ಎಂದು ತಿಳಿಯಲು ಸ್ಕ್ಯಾನ್ ಪ್ರತಿಯನ್ನು ಪಡೆಯಬಹುದು.

ಸಾಮಾನ್ಯ ಅರ್ಜಿ ಅವಧಿ; ಏಪ್ರಿಲ್ 23, 2026 ರಿಂದ ಏಪ್ರಿಲ್ 26, 2026 ರವರೆಗೆ. ದಂಡ ಶುಲ್ಕದೊಂದಿಗೆ ಅವಧಿ; ಏಪ್ರಿಲ್ 27 ರಿಂದ ಏಪ್ರಿಲ್ 28 ರವರೆಗೆ (ಪ್ರತಿ ದಿನಕ್ಕೆ 100 ದಂಡ ಇರುತ್ತದೆ). ಶುಲ್ಕ; ಕರ್ನಾಟಕ-ಒನ್ ಅಥವಾ ಆನ್‌ಲೈನ್ ಮೂಲಕ ಪ್ರತಿ ವಿಷಯಕ್ಕೆ ?400 ನಿಗದಿಪಡಿಸಲಾಗಿದೆ. ಆಫ್‌ಲೈನ್ ಕೇಂದ್ರಗಳಲ್ಲಿ ಸೇವಾ ಶುಲ್ಕ ಸೇರಿ ಇದು 820 ಆಗಬಹುದು. ಬೆಂಗಳೂರು-ಒನ್ / ಕರ್ನಾಟಕ-ಒನ್ ಕೇಂದ್ರಗಳು: ನೇರವಾಗಿ ಕೇಂದ್ರಕ್ಕೆ ಭೇಟಿ ನೀಡಿ ಹಣ ಪಾವತಿಸಬಹುದು. ಇಲ್ಲಿ ಹೆಚ್ಚುವರಿ ಸೇವಾ ಶುಲ್ಕದೊಂದಿಗೆ ಕ್ರಮವಾಗಿ 420 ರೂ. ಮತ್ತು 820 ರೂ. ಪಾವತಿಸಬೇಕಾಗುತ್ತದೆ.

ಮರುಮಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸ್ಕ್ಯಾನ್ ಪ್ರತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಗಳನ್ನು ಮಂಡಳಿಯು ಪುರಸ್ಕರಿಸುವುದಿಲ್ಲ. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ವಿಷಯದ ಕೋಡ್ ನ್ನು ಸರಿಯಾಗಿ ನಮೂದಿಸಬೇಕು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *