
ಭದ್ರಾವತಿ :- ತಾಲೂಕಿನ ಹನುಮಂತಪುರ ಮತ್ತು ಅಶೋಕ ನಗರ -2 ನಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಅಡಿಕೆ ಮರಗಳು ಧರೆಗುರುಳಿವೆ, ಜೊತೆಗೆ ಸುಮಾರು ಮನೆಗಳ ಚಾವಣಿ ಹಾರಿ ಹೋಗಿ ಮತ್ತೆಲ್ಲೋ ಬಿದ್ದಿವೆ.

ಅಡಕೆಮರಗಳು ಧರೆಗುರುಳಿರುವುದರಿಂದ ಹನುಮಂತಪುರದಿಂದ ಆಶೋಕನಗರ -2 ಸಂಪರ್ಕ ರಸ್ತೆಯುದ್ದಕ್ಕೂ ಮರಗಳು ಬಿದ್ದು ರಸ್ತೆ ಸಂಪರ್ಕವಿಲ್ಲದಂತಾಗಿದೆ. ಅದೇ ರೀತಿ ಮಲ್ಗೇನಹಳ್ಳಿಯಲ್ಲೂ ಸಾವಿರಾರು ಮರಗಳು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಾಕಷ್ಟು ಹಾನಿಗೊಳಗಾಗಿದೆ.

ಸಾಕಷ್ಟು ಹಾನಿ ಮಾಡಿರುವ ಈ ಬಿರುಗಾಳಿ ಸಹಿತ ಮಳೆ ಎರಡು ಮೂರು ದಿನಗಳ ಕಾಲ ವಿದ್ಯುತ್ ಮತ್ತು ದೂರವಾಣಿ ಸಂಪರ್ಕದ ತೊಂದರೆ ಉಂಟಾಗಲಿದೆ. ಹಿಂದೆಂದು ಕಾಣದಂತಹ ಸುಂಟರ ಗಾಳಿ ಆತಂಕ ಮತ್ತು ಹಾನಿಗೆಡವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



