
ತೀರ್ಥಹಳ್ಳಿ :- ತಾಲೂಕಿನ ಮಾಳೂರು ಸೀಮೆ ಗುತ್ತಿ ಯಡೇಹಳ್ಳಿ ಶ್ರೀ ಗುತ್ಯಮ್ಮನವರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಏ. 30ರಿಂದ ಮೇ 2ರವರೆಗೆ ವಿಜೃಂಭಣೆಯಿಂದ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಏ. 30ರ ಗುರುವಾರ ಬೆಳಿಗ್ಗೆ 10ಗಂಟೆಗೆಯಿಂದ ಶ್ರೀ ಗುರು ಗಣೇಶ ಪೂಜೆ, ಪುಣ್ಯಾಹ, ದೇವಾನಾಂದಿ, ಗರುಡ ಧ್ವಜಾರೋಹಣ ಹಾಗೂ ರಾತ್ರಿ ಅಂಕುರಾರ್ಪಣೆ, ಬೇರಿತಾಡನ, ಕೌತುಕ ಬಂಧನ ಇತ್ಯಾದಿ ಪೂಜೆಗಳು ನಡೆಯಲಿವೆ.

ಮೇ 1ರ ಶುಕ್ರವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ ನಂತರ ಮಧ್ಯಾಹ್ನ 12.25ಕ್ಕೆ ಶ್ರೀ ಗುತ್ಯಮ್ಮ ದೇವಿಯ ಮಹಾ ರಥಾರೋಹಣ ಹಾಗೂ ರಾತ್ರಿ ಶ್ರೀಮನ್ ಮಹಾ ರಥೋತ್ಸವ ಮೇ 2ರ ಶನಿವಾರ ಬೆಳಿಗ್ಗೆ 10ಗಂಟೆಗೆ ಕುಂಕುಮೋತ್ಸವ, ಅವಭೃತಸ್ನಾನ, ದರ್ಪಣ ದರ್ಶನ ಹಾಗೂ ಮತ್ತಿತರ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಮೇ 2ರ ರಾತ್ರಿ 9.30ಕ್ಕೆ ಗುತ್ತಿ ಯಡೇಹಳ್ಳಿ ಮಾಳೂರು ಸೀಮೆಯ ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ರಥೋತ್ಸವ ಮತ್ತು ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಲು ಧರ್ಮದರ್ಶಿಗಳಾದ ಶ್ರೀಮತಿ ಸುಪ್ರಿಯಾ ವೈ.ವಿ. ಪದ್ಮನಾಭ ಗೌಡರು ಕೋರಿದ್ದಾರೆ.


