<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದಲ್ಲಿ ರಿವರ್ ಕಂಪನಿಯ ಮೊದಲ ಮಾರಾಟ ಮಳಿಗೆ ಪ್ರಾರಂಭ

Banner Ad
ಶಿವಮೊಗ್ಗದಲ್ಲಿ ರಿವರ್ ಕಂಪನಿಯ ಮೊದಲ ಮಾರಾಟ ಮಳಿಗೆ ಪ್ರಾರಂಭ

ಶಿವಮೊಗ್ಗ :- ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ರಿವರ್ ಮೊಬಿಲಿಟಿಯು ಶಿವಮೊಗ್ಗದಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. MAG ಎಂಟರ್ಪ್ರೈಸಸ್ನ ಸಹಭಾಗಿತ್ವದಲ್ಲಿ ಪ್ರಾರಂಭವಾದ ರಿವರ್ ಸ್ಟೋರ್ ಅನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಈ ಪ್ರತಿಷ್ಟಿತ ಕಂಪನಿಯು ರಾಜ್ಯದಲ್ಲಿ ನಾನಾಕಡೆ ಮಾರಾಟ ಮಳಿಗೆಯನ್ನು ಪ್ರಾರಂಭಿಸಿದ್ದು ಇದೀಗ ಶಿವಮೊಗ್ಗದಲ್ಲಿ ಪ್ರಾರಂಭಿಸುತ್ತಿದೆ. ಯಶಸ್ವಿಯಾಗಿ ಗ್ರಾಹಕರ ಮನ ಮುಟ್ಟಲಿ ಹಾಗೂ ಉತ್ತಮ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.

ಈ ಹೊಸ ಮಳಿಗೆಯು ಗ್ರಾಹಕರಿಗೆ ಪರೀಕ್ಷಾ ಸವಾರಿಗಳು, ಮಾರಾಟ, ಪರಿಕರಗಳು ಮತ್ತು ಸೇವಾ ಬೆಂಬಲವನ್ನು ಒಳಗೊಂಡ ಸಂಪೂರ್ಣ ಮಾಲೀಕತ್ವದ ಅನುಭವ ನೀಡುತ್ತದೆ.ಱಈಗಾಗಲೇ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ 14 ಮಳಿಗೆಗಳನ್ನು ನಿರ್ವಹಿಸುತ್ತಿದ್ದಾರೆ.

ಕಾರ್‍ಯಕ್ರಮದಲ್ಲಿ ಮಾರಾಟ ಮುಖ್ಯಸ್ಥ ಕೆ.ವಿ. ದಿನೇಶ್ ಅವರು ಮಾತನಾಡಿ, ಬಿಎಚ್ ರಸ್ತೆಯಲ್ಲಿ ಸ್ಥಾಪಿತ ರಿವರ್ ಸ್ಟೋರ್ ಉತ್ಪನ್ನಗಳು ಮತ್ತು ಸೇವೆಗಳು ಗ್ರಾಹಕರಿಗೆ ಸುಲಭವಾಗಿ ದಕ್ಕುವಂತೆ ಮಾಡುವ ಮೂಲಕ ಮತ್ತು ತಡೆರಹಿತ ಮಾಲೀಕತ್ವದ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಕರ್ನಾಟಕದಾದ್ಯಂತ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದನ್ನು ಮುಂದುವರಿಸಲು ಉತ್ಸುಕ ರಾಗಿದ್ದೇವೆ ಎಂದು ಹೇಳಿದರು.

ನಿರ್ದೇಶಕ ಸೈಯದ್ ಗೌಸ್ ಪೀರ್ ಪಾಲುದಾರಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಕಂಪನಿಯ ಬೆಳವಣಿಗೆಯ ಆವೇಗಕ್ಕೆ ಅನುಗುಣವಾಗಿ, ಕಳೆದ ಏಪ್ರಿಲ್ನಲ್ಲಿ, ರಿವರ್ನ ಒಟ್ಟಾರೆ ಮಾರಾ ಟಕ್ಕೆ ಶೆ. 26ಕ್ಕಿಂತ ಹೆಚ್ಚಿನ ಕೊಡುಗೆಯನ್ನು ಕರ್ನಾಟಕ ನೀಡಿತು. ಭಾರತದಲ್ಲಿ ಬ್ರ್ಯಾಂಡ್ಗೆ ಎರಡನೇ ಅತಿದೊಡ್ಡ ಇವಿ ಮಾರುಕಟ್ಟೆಯಾಗಿದೆ ಎಂದರು. ಪ್ರಸ್ತುತ ನೂತನ ಮಾರಟ ಮಳಿಗೆ ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿ ಅರವಿಂದ್ ಮೋಟಾರ್ಸ್ ಎದುರು ಪ್ರಾರಂಭವಾಗಿದ್ದು, ಗ್ರಾಹಕರು ಸಂಪರ್ಕಿಸಲು ಕಂಪನಿಯ ಪ್ರಮುಖರು ಇಂದು ಕಾರ್‍ಯಕ್ರಮದಲ್ಲಿ ತಿಳಿಸಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *