<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಶಾಸಕ ಬೇಳೂರು

Banner Ad
ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಶಾಸಕ ಬೇಳೂರು

ಸಾಗರ :- ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕಾಗಿ ತೆರವುಗೊಂಡಿದ್ದ ಸಾಗರದ ಎಲ್ ಬಿ ಕಾಲೇಜಿನ ಮುಂಭಾಗದ ವಿದ್ಯಾರ್ಥಿಗಳ ತಂಗುದಾಣ ನಿರ್ಮಾಣವಾಗದೆ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ತೊಂದರೆ ಗಮನಿಸಿದ ಸಾಗರ – ಹೊಸನಗರ ಕ್ಷೇತ್ರದ ಶಾಸಕ ಮತ್ತು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸ್ಪಂಧಿಸಿದ್ದಾರೆ.

ಈ ಸಂಬಂಧ ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿ ಕಾಲೇಜಿನ ಮುಂಭಾಗ ಸ್ಥಳ ವೀಕ್ಷಣೆ ನಡೆಸಿ ತಂಗುದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ, ಸಿದ್ದಾಪುರದಿಂದ ಬರುವ ಬಸ್ ಗಳು ಶಿರವಂತೆ ಮತ್ತು ನಂತರದ ಊರುಗಳಲ್ಲಿ ನಿಲುಗಡೆ ಕೊಡದಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಕಾಲೇಜಿನ ಪ್ರಾoಶುಪಾಲರು ವಿವರಿಸಿದಾಗ ಇದಕ್ಕೆ ಸ್ಪಂಧಿಸಿದ ಶಾಸಕರು ಕಾಲೇಜಿನಿಂದ ಮನವಿ ಪತ್ರ ಸ್ವೀಕರಿಸಿ, ಸಾಗರದಿಂದ ಶಿರವಂತೆಯವರೆಗೆ ನಗರ ಸಾರಿಗೆ ಸೌಲಭ್ಯವನ್ನು ವಿಸ್ತರಿಸುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳಿಗಾಗಿ ತಂಗುದಾಣವನ್ನು ನಿರ್ಮಿಸಲು ಕಳೆದ ಮೇ ೧೮ರಂದು ಕಾಲೇಜಿಗೆ ಭೇಟಿ ನೀಡಿದ್ದ ಶಾಸಕ ಬೇಳೂರು, ಕೊಟ್ಟ ಭರವಸೆಯಂತೆ ತಂಗುದಾಣ ನಿರ್ಮಾಣಕ್ಕೆ ಮೇ ೨೧ರಂದು ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು. ಎಂ ಡಿ ಎಫ್ ಅಧ್ಯಕ್ಷ ಬಿ.ಆರ್. ಜಯಂತ್, ಉಪಾಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ವೆಂಕಟೇಶ್, ಎಲ್ ಬಿ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಶ ಎ ಎಸ್, ಬಿ ಎಡ್ ಕಾಲೇಜಿನ ಪ್ರಾoಶುಪಾಲರಾದ ಡಾ. ಶಿಲ್ಪಾ ವಿ. ಎನ್, ಎಂಡಿಎಫ್ ನ ಪಧಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಗೂ ಕುಗ್ವೆ ಗ್ರಾಮಸ್ಥರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *