<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದಲ್ಲಿ ನಾಲ್ಕು ಶಾಲಾ ಬಸ್‌ಗಳ ಚಾಲಕರ ಮೇಲೆ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲು : ಪೋಷಕರಲ್ಲಿ ಆತಂಕ : ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಹೇಳಿದ್ದೇನು…?

Banner Ad
ಶಿವಮೊಗ್ಗದಲ್ಲಿ ನಾಲ್ಕು ಶಾಲಾ ಬಸ್‌ಗಳ ಚಾಲಕರ ಮೇಲೆ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲು : ಪೋಷಕರಲ್ಲಿ ಆತಂಕ : ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಹೇಳಿದ್ದೇನು…?

ಶಿವಮೊಗ್ಗ :- ನಗರದಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವು ನೋವುಗಳ ಕೇಸ್ ಗಳು ಕೂಡ ಅಲ್ಲಲ್ಲಿ ನಡೆಯುತ್ತಲೆ ಇವೆ.

ಈ ಮಧ್ಯೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ಶಾಲಾ ಬಸ್ ನ ಚಾಲಕರುಗಳೂ ಕೂಡ ಮಧ್ಯ ಸೇವಿಸಿ ವಾಹನ ಚಲಾಯಿಸುತ್ತಿರುವ ವಿಷಯ ಶಿವಮೊಗ್ಗದಲ್ಲಿ ಇಂದು ಬೆಳಕಿಗೆ ಬಂದಿದ್ದು, ಇದು ನಿಜಕ್ಕೂ ಆತಂಕದ ಸಂಗತಿ.

ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದ ತಂಡದಿಂದ ಇಂದು ಬೆಳಿಗ್ಗೆ ನೂರಾರು ವಾಹನಗಳ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಬಸ್‌ಗಳ ಚಾಲಕರುಗಳನ್ನು ತಪಾಸಣೆಗೆ ಒಳಪಡಿಸಿದಾಗಿ ನಾಲ್ಕು ಜನ ಮಧ್ಯ ಸೇವಿಸಿದ್ದು, ಬೆಳಕಿಗೆ ಬಂದಿದೆ. ಇವರ ಮೇಲೆ ಡ್ರಂಕ್ ಅಂಡ್ ಡ್ರೈವ್ ಕೇಸ್ ಹಾಕಲಾಯಿತು.

ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೂ ಆತಂಕ ಮೂಡಿಸಿರುವ ಈ ಪ್ರಕರಣದಲ್ಲಿ 4ಜನರಿಗೆ ಡ್ರಂಕ್ ಅಂಡ್ ಡ್ರೈವ್ ಕೇಸ್, 5ಜನರಿಗೆ ಸಮವಸ್ತ್ರ ಕೇಸ್, 5ಬಸ್ ಗಳ ಎಫ್ ಸಿ ರಿನೀವಲ್ ಆಗದ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ದೇವರಾಜ್ ತಿಳಿಸಿದ್ದಾರೆ.

ಶೀಘ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಶಾಲಾ ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಇನ್ನು ಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲು ತಿಳಿಸಲಾಗುವುದು ಎಂದು ಅವರು ತಿಳಿಸಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *