
ಶಿವಮೊಗ್ಗ :- ಇನ್ನು ಮುಂದೆ ನಗರದ ಸಾಗರ ರಸ್ತೆ ಆಲ್ಕೊಳ ಸರ್ಕಲ್ ನಿಂದ ಆಯನೂರು ಗೇಟ್ ಮುಲಕ ಎಲಿಪ್ಯಾಡ್ ಕಡೆ ತೆರಳುವ ಎಲ್ಲಾ ವಾಹನಗಳಿಗೆ ಚರ್ಚ್ ಪಕ್ಕದ ಆಟೋ ಕಾಂಪ್ಲೆಕ್ಸ್ ರಸ್ತೆಗೆ ನೋ ಎಂಟ್ರಿ.
ಈ ಭಾಗದಲ್ಲಿ ಹೆಚ್ಚಾಗಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು, ಅದರಲ್ಲು ಆಯನೂರು ಗೇಟ್ ಮೂಲಕ ಹಿಮ್ಮುಖವಾಗಿ ಚಲಿಸುವ ದ್ವಿಚಕ್ರ ವಾಹನಗಳು ಕಾರುಗಳಿಗೆ ಕಡಿವಾಣ ಹಾಕಲು, ಮುಖ್ಯವಾಗಿ ಸಾಗರ ರಸ್ತೆಯಿಂದ ಆಟೋ ಕಾಂಪ್ಲೆಕ್ಸ್ ಗೆ ದುರಸ್ತಿಗಾಗಿ, ಭಾರಿ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳು ಇಲ್ಲಿಗೆ ಹೋಗುವುದರಿಂದ ಸಾಕಷ್ಟು ತೊಂದರೆ ಆಗುತ್ತಿದ್ದುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದ್ದಾರೆ.
ನೋ ಎಂಟ್ರಿ ಅಧಿಸೂಚನೆ ಹೊರಡಿಸಲು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಅಪಘಾತ ತಪ್ಪಿಸುವ ಉದ್ದೇಶವಾಗಿದ್ದು, ಜೊತೆಗೆ ದಿನೇ ದಿನೆ ವಾಹನಗಳ ಸಂಖ್ಯೆಯಲ್ಲು ಕೂಡ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಸಿಗ್ನಲ್ ಅಲ್ಲಿ ವಾಹನಗಳ ಸರತಿ ಸಾಲು ಹೆಚ್ಚಾಗಿ ತೊಂದರೆಯಾಗುತ್ತಿದೆ.
ಸಾಗರ ರಸ್ತೆ ಮೂಲಕ ವಾಹನಗಳು ಆಟೋ ಕಾಂಪ್ಲೆಕ್ಸ್ ಗೆ ಹೆಚ್ಚಾಗಿ ಹೋಗುತ್ತಿದ್ದು ಅಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಈ ಎಲ್ಲ ಸಮಸ್ಯೆ ಗಳನ್ನು ಗಮನದಲ್ಲಿಟ್ಟುಕೊಂಡು ನೋ ಎಂಟ್ರಿಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


