
ಶಿವಮೊಗ್ಗ :- ಸಾಗರ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಿರಿಯ ರಾಜಕಾರಣಿಗಳಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೆಯೇ ಮಧುಬಂಗಾರಪ್ಪ ಅವರನ್ನು ಕೂಡ ಸಚಿವರನ್ನಾಗಿ ಮುಂದುವರಿಸಬೇಕು ಎಂದು ಸಾಗರ ಕ್ಷೇತ್ರದ ಮುಖಂಡ ಹಾಗೂ ಮಾಜಿ ಜಿ.ಪಂ. ಸದಸ್ಯ ಬಿ.ಆರ್. ಜಯಂತ್ ಹಾಗೂ ಗೋಪಾಲಕೃಷ್ಣ ಬೇಳೂರು ಅವರ ಗೆಳೆಯರ ಬಳಗ ಇಂದು ಪ್ರಬಲವಾಗಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಆರ್.ಜಯಂತ್, ಗೋಪಾಲಕೃಷ್ಣಬೇಳೂರು ಅವರು ಮೂರುಬಾರೀ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಅಪಾರ ಜನಮನ್ನಣೆಗಳಿಸಿದ್ದಾರೆ. ಪ್ರಮುಖವಾಗಿ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯದ ನಾಯಕತ್ವ ಹೊಂದಿದ್ದಾರೆ. ಮಲೆನಾಡಿನಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಬೇಳೂರು ಅವರ ನಾಯಕತ್ವ ಬೇಕೇ ಬೇಕಾಗಿದೆ. ಆದ್ದರಿಂದ ಮಂತ್ರಿಮಂಡಲದಲ್ಲಿ ಅವರಿಗೆ ಸ್ಥಾನ ನೀಡಲೇಬೇಕು ಎಂದರು.
ಡಿ.ಕೆ. ಶಿವಕುಮಾರ್ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಬಲಿಷ್ಠವಾಗುತ್ತದೆ ಎಂಬ ನಂಬಿಕೆ ನಮಗಿದೆ. ಸಾಗರ ಭಾಗಕ್ಕೂ ಆದ್ಯತೆಕೊಡುವ ಹಿನ್ನಲೆಯಲ್ಲಿ ಬೇಳೂರು ಅವರಿಗೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರವರಿಷ್ಠರು, ಸಚಿವಸ್ಥಾನವನ್ನು ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿಜಿ.ಪಂ.ಮಾಜಿ ಸದಸ್ಯೆ ಅನಿತಾಕುಮಾರಿ, ಕಾಂಗ್ರೆಸ್ ಮುಖಂಡ ಚಂದ್ರಮಳಿ, ಪ್ರಮುಖರುಗಳಾದ ಇಂದೂಧರ, ಸೋಮಶೇಖರ್, ಗಣಪತಿ, ಅಶೋಕ್ ಬೇಳೂರು, ಚಂದ್ರಪ್ಪ, ಸುರೇಶ್ ಬಾಬು, ರವಿಗೌಡ್ರು, ಚಿದಂಬರ್, ವಿರೇಶ್‌ಗೌಡ್ರು, ಸತ್ಯನಾರಾಯಣ್ ಸೇರಿದಂತೆ ಹಲವರಿದ್ದರು. ವೇದಿಕೆಯ ಕೆಳಭಾಗದಲ್ಲೂ ಕೂಡ ನೂರಾರು ಅಭಿಮಾನಿಗಳು ಹಾಜರಿದ್ದರು.


