
ಶಿವಮೊಗ್ಗ :- ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ಕಾರಿ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು, ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಅಚೀವರ್ಸ್ ಅಕಾಡೆಮಿಯು ಜೂ.13 ರಿಂದ 17 ರವೆಗೆ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿಯ ಪ್ರಧಾನ ಪ್ರಚಾರಕ ವರುಣ್ ಹೇಳಿದರು.
ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಮುಖವಾಗಿ 3395 ಹಾಗೂ 596 ಸಿವಿಲ್ ಕಾನ್ಟೆಬಲ್ ಹುದ್ದೆಗಳನ್ನು ಕರೆಯಲಾಗಿದೆ. ಇದರ ಜೊತೆಗೆ ರೈಲ್ವೆ ಇಲಾಖೆಯಲ್ಲಿ 11000 ಹುದ್ದೆಗಳನ್ನು ಕೇಂದ್ರ ಸರ್ಕಾರ ಕರೆದಿದೆ. ಅಲ್ಲದೆ ವಿಲೆಜ್ ಅಕೊಟೆಂಟ್ ಹುದ್ದೆಗೆ 500 ಜನರನ್ನ ತುಂಬಿಕೊಳ್ಳಲಾಗುವುದು. ಸಿಜಿಎಲ್ ಹುದ್ದೆಗಳು 12,256, ಬ್ಯಾಂಕಿಗ್ ಹುದ್ದೆಗಳು 22,281, ರೈಲ್ವೆಯ ಜೆಇ, ಎನ್‌ಟಿಪಿಸಿ ಹುದ್ದೆಗಳು 10 ಸಾವಿರ ಇವೆ ಎಂದರು.

ಈ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಈ ಪರೀಕ್ಷೆ ಕಷ್ಟಕರವಾಗಿರುತ್ತದೆ ಹಾಗಾಗಿ ಪರೀಕ್ಷೆಯನ್ನ ಹೇಗೆ ಎದುರಿಸಬೇಕು. ಸಿದ್ದತೆ ಹೇಗೆ ಮಾಡಿಕೊಳ್ಳಬೇಕು ಎಂದು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ 5 ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ತಿಲಕ್ ನಗರದಲ್ಲಿರುವ ಅಚಿವರ್ಸ್ ಅಕಾಡೆಮಿ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಕಾಡೆಮಿ ನಿರ್ದೇಶಕಿ ಪವಿತ್ರ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಇದ್ದರು.



