<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಸ್ಥಳೀಯ ನಿವಾಸಿಗಳು ಒಗ್ಗಟ್ಟಾದಾಗ ಮಾತ್ರ ಆ ಭಾಗದ ಕೆಲಸಗಳು ಅಚ್ಚುಕಟ್ಟಾಗಿ ಆಗುತ್ತದೆ : ಬಿ.ವೈ. ರಾಘವೇಂದ್ರ

Banner Ad
ಸ್ಥಳೀಯ ನಿವಾಸಿಗಳು ಒಗ್ಗಟ್ಟಾದಾಗ ಮಾತ್ರ ಆ ಭಾಗದ ಕೆಲಸಗಳು ಅಚ್ಚುಕಟ್ಟಾಗಿ ಆಗುತ್ತದೆ : ಬಿ.ವೈ. ರಾಘವೇಂದ್ರ

ಶಿವಮೊಗ್ಗ :- ಕಾಶಿಪುರದ ಹಸಿರು ಶಿವಮೊಗ್ಗ ಮತ್ತು ಸುಸ್ಥಿರ ಪರಿಸರದ ಆಶಯದೊಂದಿಗೆ, ಪಶು ವೈದ್ಯಕೀಯ ಕಾಲೇಜು ಮುಖ್ಯ ರಸ್ತೆ ನಿವಾಸಿಗಳ ಸಂಘಹಾಗೂ ಸ್ಟೇಟ್ ಪಿಯು ಕಾಲೇಜ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಘದ ಅಧಿಕೃತ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಮನೆಯ ಮುಂದೆ ಸಸಿ ನೆಡುವ ಅಪೂರ್ವ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕು. ಈ ಸಂಘದ ಉದ್ಘಾಟನೆಯನ್ನು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ. ಸ್ಥಳೀಯ ನಿವಾಸಿಗಳು ಒಗ್ಗಟ್ಟಾದಾಗ ಮಾತ್ರ ಆ ಭಾಗದಲ್ಲಿ ಕೆಲಸ-ಕಾರ್ಯಗಳು ನಡೆಯುತ್ತದೆ. ಪಾಲಿಕೆ, ಎಂಎಲ್‌ಎ, ಎಂಪಿ ಅವರ ಗಮನಕ್ಕೆ ಆ ಭಾಗದಲ್ಲಿ ಕೊರತೆಯಿದ್ದರೆ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಲು ಸಂಘ-ಸಂಸ್ಥೆಯ ಅವಶ್ಯಕತೆ ಇದೆ ಎಂದರು.

ಶಿವಮೊಗ್ಗದಲ್ಲಿ ಈಗ ರೈಲ್ವೆ, ಹೈವೇ, ಏರ್‌ವೇ ಸಂಪರ್ಕ ಇದೆ. ಕೋಟೆಗಂಗೂರು, ಕೋಚಿಂಗ್ ಡಿಪೋ ಆದ ನಂತರ ವಿನೋಬನಗರ ಭಾಗದಲ್ಲೂ ರೈಲು ನಿಲುಗಡೆ ಮಾಡಬೇಕೆಂಬ ಬೇಡಿಕೆಯಿದೆ. ಇದನ್ನು ಕೂಡ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ. ರೈಲ್ವೆ ಹಳಿಗೆ ಸಿಲುಕಿ ಗೋವುಗಳು ಮೃತಪಟ್ಟ ಹಾಗೂ ರಾಜಕಾಲುವೆಗೆ ಬಿದ್ದು ಹಲವು ದೂರುಗಳಿದ್ದು, ಫೆನಿಷಿಂಗ್ (ಬೇಲಿ) ಮಾಡಬೇಕೆಂಬ ಬೇಡಿಕೆ ಇದೆ. ಅದನ್ನೂ ಕೂಡ ಮಾಡಲಾಗುವುದು ಎಂದರು. ಈ ಸರ್ಕಾರ ಬಂದ ಮೇಲೆ ಮಾತೆತ್ತಿದರೆ ಗ್ಯಾರೆಂಟಿಗೆ ಹಣ ನೀಡಿದ್ದೇವೆ ಎನ್ನುತ್ತಾರೆ. ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಒಳ್ಳೆಯ ದಿನ ಬಂದೇ ಬರುತ್ತದೆ. ಮತ್ತೆ ನಾವೆಲ್ಲರೂ ಸೇರಿ ಅಭಿವೃದ್ಧಿ ಮಾಡೋಣ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪ್ರತಿ ಮಳೆಗಾಲದಲ್ಲೂ ಇಲ್ಲಿ ನೀರು ನಿಲ್ಲುವ ಸಮಸ್ಯೆಯಿದೆ. ಈಗ ಅದಕ್ಕೆ ಶಾಶ್ವತ ಪರಿಹಾರಕ್ಕೆ ಮಹಾತ್ಮಾಗಾಂಧಿ ನಗರೋತ್ತಾನೆ ಯೋಜನೆಯಡಿ ಸತತ ಮೂರು ವರ್ಷಗಳ ಪ್ರಯತ್ನದಿಂದ ಅನುದಾನ ತಂದಿದ್ದೇವೆ. ಮುಂದಿನವಾರ ಇದಕ್ಕೆ ಚಾಲನೆ ನೀಡಲಾಗುವುದು ಎಂದರು.

ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ, ಸಂಘದ ಅಧ್ಯಕ್ಷ ನಟರಾಜ್, ಕಾರ್ಯದರ್ಶಿ ಸೋಮನಾಥ್, ಪ್ರಮುಖರಾದ ಧರ್ಮರಾಜ್, ದಿನೇಶ್, ಉಮೇಶ್, ಜಮದಗ್ನಿ ಭಟ್, ಪೂರ್ಣಿಮಾ, ಮನೇಶ್, ಪ್ರಶಾಂತ್, ರವಿಕುಮಾರ್, ರಮೇಶ್ ಮತ್ತಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *