
ಶಿವಮೊಗ್ಗ :- ನರೇಂದ್ರ ಮೋದಿ ಅವರು 4399 ದಿನಗಳ ಸುದೀರ್ಘ ಕಾಲ ಯಶಸ್ವಿಯಾಗಿ ಪ್ರಧಾನಿಯಾಗಿ ಆಡಳಿತ ನಡೆಸುವುದರ ಮೂಲಕ 4398 ದಿನಗಳ ಕಾಲ ಭಾರತದ ಪ್ರಧಾನಿಯಾಗಿ ಆಡಳಿತ ನಡೆಸಿದ ಜವಾಹರಲಾಲ್ ನೆಹರು ಅವರ ದಾಖಲೆ ಮುರಿದಿದ್ದಲ್ಲದೆ ಭಾರತವನ್ನು ವಿಶ್ವಮಟ್ಟಕ್ಕೆ ಏರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಭಿವೃದ್ಧಿ ಮತ್ತು ಅಸಾಮಾನ್ಯ ಜನರ ಕಲ್ಯಾಣಕ್ಕಾಗಿ ಗರೀಬ್ ಕಲ್ಯಾಣ್ ಯೋಜನೆ, ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆ, ರೈತರಿಗೆ ಪಿಎಂ ಕಿಸಾನ್ ಯೋಜನೆ, ಜನ್ ಧನ್ ಯೋಜನೆ, ಯುವಜನ ಸಬಲೀಕರಣ, ಬಡ ಮಹಿಳೆಯರಿಗಾಗಿ ಉಜ್ವಲ್ ಯೋಜನೆ, ಡಿಜಿಟಲ್ ಇಂಡಿಯಾ, ಆರೋಗ್ಯ ಕಾಳಜಿಗಾಗಿ ಆಯುಷ್‌ಮಾನ್ ಆರೋಗ್ಯ ಯೋಜನೆಗಳಂಥಹ ಜನ ಪರ ಯೋಜನೆಗಳನ್ನು ಜರಿಗೊಳಿಸಿದ್ದಲ್ಲದೆ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪ್ರಧಾ ನರೇಂದ್ರ ಮೋದಿ ಪಾತ್ರರಾಗಿದ್ದಾರೆ ಎಂದರು.
ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಅಂದರೆ 2004ರಲ್ಲಿ ದೇಶದಲ್ಲಿ ಕೇವಲ ಐದು ನಗರಗಳಲ್ಲಿ ಮೆಟ್ರೋ ಜಲಗಳಿದ್ದು ಈಗ ಅದು 29 ನಗರಗಳಲ್ಲಿ 1300 ಕಿ.ಮೀ.ಗೆ ಏರಿಕೆಯಾಗಿದೆ.ಇನ್ನೂ 900 ಕಿ.ಮೀ.ಮೆಟ್ರೋ ರೈಲು ಮಾರ್ಗದ ರ್ಮಾಣ ಪ್ರಗತಿಯಲ್ಲಿದೆ ಎಂದ ಅವರು ಯುಪಿಐ ಡಿಜಿಟಲ್ ಇಂಡಿಯಾ ಮೂಲಕ ಶೇ.85ರಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತಿದ್ದು ಇದರಲ್ಲೂ ಭಾರತ ವಿಶ್ವಗುರು ಆಗುವತ್ತ ದಾಪುಕಾಲಿಡುತ್ತಿದೆ. ಮಾರ್ಚ 2026ರ ಹೊತ್ತಿಗೆ 2264 ಸಾವಿರ ಕೋಟಿ ರೂ. ವಹಿವಾಟು ನಡೆಸಲಾಗಿದೆ. 2014ರಲ್ಲಿ ದೇಶದ ಗಿಡಿಪಿ 106 ಲಕ್ಷ ಕೋಟಿ ರೂ.ಇದ್ದು ಮೋದಿ ಆಡಳಿತದಲ್ಲಿ ಅದು ಮೂರು ಪಟ್ಟು ಹೆಚ್ಚಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2014ರಿಂದ ಇಲ್ಲಿಯವರೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರದಿಂದ 73 ಯೋಜನೆಗಳಿಗೆ ಸುಮಾರು 20ರಿಂದ 22 ಸಾವಿರ ಕೋಟಿ ರೂ.ಗಳ ಅನುದಾನ ಬಂದಿದೆ. 990 ಕೋಟಿ ರೂ.ವೆಚ್ಚಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜರಿಗೆ ತರಲಾಗಿದೆ. ಶಿವಮೊಗ್ಗದಲ್ಲಿ ಕುವೆಂಪು ಹೆಸರಿನಲ್ಲಿ ವಿಮಾನ ಲ್ದಾಣ, ಶರಾವತಿ ನದಿಗೆ ಅಡ್ಡಲಾಗಿ ಸಿಗಂಧೂರು ಸೇತುವೆ ರ್ಮಾಣವಾಗಿದೆ. ಈಗ ಶಿವಮೊಗ್ಗ-ಶೃಂಗೇರಿ-ಮಂಗಳೂರಿಗೆ ರೈಲ್ವೇ ಮಾರ್ಗಕ್ಕಾಗಿ ಸರ್ವೇ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರಿಕೃಷ್ಣ, ಎನ್.ಡಿ.ಸತೀಶ್, ಕುಪೇಂದ್ರಪ್ಪ ಆಯನೂರು, ದರ್ಶನ್, ಪದ್ಮಿನಿ, ಚಂದ್ರಶೇಖರ್, ಮಂಜುನಾಥ್ ಮೊದಲಾದವರಿದ್ದರು.


