
ಶಿವಮೊಗ್ಗ: ತೀರ್ಥಹಳ್ಳಿಯ ಹೆಮ್ಮೆಯ ನ್ಯಾಷನಲ್ ಗ್ರೂಪ್ ತನ್ನ ವ್ಯಾಪಾರ ವಿಸ್ತರಣೆಯ ಭಾಗವಾಗಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿ ಎರಡನೇ ಶೋ ರೂಂ ಅನ್ನು ಅದ್ಧೂರಿಯಾಗಿ ಆರಂಭಿಸಿದೆ. ಕನ್ನಡ ಚಿತ್ರರಂಗದ ನಟಿ ಖುಷಿ ರವಿ ನೂತನ ಶೋ ರೂಂ ಅನ್ನು ಉದ್ಘಾಟಿಸಿ ಶುಭ ಹಾರೈಸಿ ಮಾತನಾಡುತ್ತಾ, ಗ್ರಾಹಕರ ವಿಶ್ವಾಸವೇ ಯಾವುದೇ ಸಂಸ್ಥೆಯ ದೊಡ್ಡ ಶಕ್ತಿ. ತೀರ್ಥಹಳ್ಳಿಯಿಂದ ಆರಂಭವಾಗಿ ಇಂದು ಶಿವಮೊಗ್ಗದಲ್ಲಿ ಎರಡನೇ ಶಾಖೆ ಆರಂಭಿಸಿರುವುದು ನ್ಯಾಷನಲ್ ಗ್ರೂಪ್‌ನ ಪರಿಶ್ರಮ ಹಾಗೂ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ನ್ಯಾಷನಲ್ ಗ್ರೂಪ್ ಸಹೋದರರು ಮಾತನಾಡಿ, ಗ್ರಾಹಕರ ಪ್ರೋತ್ಸಾಹ ಮತ್ತು ಬೆಂಬಲ ದಿಂದ ಸಂಸ್ಥೆ ನಿರಂತರವಾಗಿ ಬೆಳೆಯುತ್ತಿದ್ದು, ಗುಣಮಟ್ಟದ ಸೇವೆ ಹಾಗೂ ಉತ್ತಮ ಉತ್ಪನ್ನಗಳನ್ನು ಜನರಿಗೆ ಒದಗಿಸುವ ಗುರಿಯೊಂದಿಗೆ ಹೊಸ ಶಾಖೆಯನ್ನು ಆರಂಭಿಸಲಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು, ವ್ಯಾಪಾರಸ್ಥರು, ಗ್ರಾಹಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಶೋ ರೂಂಗೆ ಶುಭ ಹಾರೈಸಿದರು. ನೂತನ ಶಾಖೆಯ ಆರಂಭದಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


