<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಅಮೇರಿಕ-ಇರಾನ್ ಶಾಂತಿ ಒಪ್ಪಂದದಿಂದ ಜಾಗತಿಕ ಆರ್ಥಿಕತೆಯ ಅಡಚಣೆಗಳ ನಿವಾರಣೆ : ಪ್ರಧಾನಿ ಮೋದಿ ಸ್ವಾಗತ

Banner Ad
ಅಮೇರಿಕ-ಇರಾನ್ ಶಾಂತಿ ಒಪ್ಪಂದದಿಂದ ಜಾಗತಿಕ ಆರ್ಥಿಕತೆಯ ಅಡಚಣೆಗಳ ನಿವಾರಣೆ : ಪ್ರಧಾನಿ ಮೋದಿ ಸ್ವಾಗತ

ನವದೆಹಲಿ :- ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ಮುಂದುವರಿದಿದ್ದ ಉದ್ವಿಗ್ನತೆ ಅಂತ್ಯಗೊಳಿಸಲು ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಸ್ವಾಗತಿಸಿದ್ದಾರೆ. ಈ ಒಪ್ಪಂದದಿಂದ ಜಗತಿಕ ಆರ್ಥಿಕತೆಗೆ ಉಂಟಾಗಿದ್ದ ಅಡಚಣೆಗಳು ನಿವಾರಣೆಯಾಗುವ ಜೊತೆಗೆ, ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಯುರೋಪ್ ಪ್ರವಾಸದ ಅಂಗವಾಗಿ ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾಹೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಸಾಮಾಜಿಕ ಜಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಗೊಳಿಸುವ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ಮೂಡಿರುವ ಪರಸ್ಪರ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಈ ಸಂಘರ್ಷದಿಂದ ವಿಶ್ವದಾದ್ಯಂತ ಆರ್ಥಿಕ ವ್ಯತ್ಯಯ ಉಂಟಾಗಿದ್ದು, ಹಲವು ದೇಶಗಳಲ್ಲಿ ಜೀವಹಾನಿಯೂ ಸಂಭವಿಸಿದೆ.

ಈ ಒಪ್ಪಂದದ ಅನುಷ್ಠಾನದಿಂದ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಲಿ. ಜೊತೆಗೆ ಸಾಗರ ಮಾರ್ಗದ ಸಂಚಾರ ಹಾಗೂ ವ್ಯಾಪಾರದ ಸ್ವಾತಂತ್ರ್ಯ ಪುನಃ ಖಚಿತವಾಗಲಿ ಎಂಬುದು ಭಾರತದ ಆಶಯವಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ಘೋಷಿಸಿದ್ದರು.

ಜಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಶುಕ್ರವಾರದಿಂದ ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ, ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧವನ್ನು ಅಂತ್ಯಗೊಳಿಸುವಂತೆ ಸೂಚಿಸಿರುವುದಾಗಿಯೂ ಹೇಳಿದ್ದರು. ಜಗತ್ತಿನ ಹಡಗುಗಳೇ, ಮತ್ತೆ ಸಂಚಾರ ಆರಂಭಿಸಿ. ತೈಲ ಹರಿಯಲಿ ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದರು.

ಇದೇ ವೇಳೆ, ಇರಾನ್‌ನ ಶೆಹಬಾಜ್ ಷರೀಫ್ ಕೂಡ ಒಪ್ಪಂದವಾಗಿರುವುದನ್ನು ದೃಢಪಡಿಸಿದ್ದು, ಎಲ್ಲ ವಲಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಲೆಬನಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಸ್ಥಗಿತಗೊಳಿಸುವ ಅಂಶ ಈ ಒಪ್ಪಂದದಲ್ಲಿದೆ ಎಂದು ತಿಳಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *