<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>9,99,999 ಕಿಲೋಮೀಟರ್‌ಗಳ ಅಪರೂಪದ ಮೈಲುಗಲ್ಲನ್ನು ತಲುಪಿದ ಇನ್ನೋವಾ

Banner Ad
9,99,999 ಕಿಲೋಮೀಟರ್‌ಗಳ ಅಪರೂಪದ ಮೈಲುಗಲ್ಲನ್ನು ತಲುಪಿದ ಇನ್ನೋವಾ

ಶಿವಮೊಗ್ಗ :- ಟೊಯೋಟಾದ ಪ್ರಸಿದ್ಧ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಮತ್ತೊಂದು ಹೆಮ್ಮೆಯ ಸಾಧನೆಯಾಗಿ, ತಿರುಮಲ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಕೆ. ಸತೀಶ್ ಅವರ ಟೊಯೋಟ ಇನ್ನೋವಾ (ನೋಂದಣಿ ಸಂಖ್ಯೆ: KA14B0319) ವಾಹನವು 9,99,999 ಕಿಲೋಮೀಟರ್‌ಗಳ ಅಪರೂಪದ ಮೈಲುಗಲ್ಲನ್ನು ಯಶಸ್ವಿಯಾಗಿ ತಲುಪಿದೆ.

ಈ ಅಪೂರ್ವ ಸಾಧನೆಯನ್ನು ಗೌರವಿಸಿ, ಶಕ್ತಿ ಟೊಯೋಟ ವತಿಯಿಂದ ಕೆ. ಸತೀಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಟೊಯೋಟ ಬ್ರ್ಯಾಂಡ್ ಹಾಗೂ ಶಕ್ತಿ ಟೊಯೋಟಾ ಮೇಲಿನ ಅವರ ನಿರಂತರ ನಂಬಿಕೆ ಮತ್ತು ವಾಹನದ ನಿಯಮಿತ ನಿರ್ವಹಣೆಯ ಮೇಲಿನ ಅವರ ಬದ್ಧತೆಯನ್ನು ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಕ್ತಿ ಟೊಯೋಟ ಸೇವಾ ವಿಭಾಗದ ಮುಖ್ಯಸ್ಥ ನಟರಾಜ್ ಜಿ ಎಂಈ ಸಾಧನೆಯು ಟೊಯೋಟ ವಾಹನಗಳ ಅಸಾಧಾರಣ ಗುಣಮಟ್ಟ, ದೀರ್ಘಾಯುಷ್ಯ ಮತ್ತು ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಎಂದು ತಿಳಿಸಿದರು. ಇದೇ ವೇಳೆ, ಪರಿಸರ ಮಾಸಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಬದುಕಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಹಕರಿಗೆ ಸಸಿಗಳನ್ನು ವಿತರಿಸಲಾಯಿತು.

ಶಕ್ತಿ ಟೊಯೋಟ ವತಿಯಿಂದ  ಕೆ. ಸತೀಶ್ ಹಾಗೂ ತಿರುಮಲ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಗೆ ಈ ಸಾಧನೆಗಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಗಿದೆ. ವಿಭಾಗದ ಮುಖ್ಯಸ್ಥ ನಟರಾಜ್ ಜಿ ಎಂ, ಹಾಸನ ಶಾಖೆ ಮುಖ್ಯಸ್ಥ ಮಧು ಎಮ್ ಪಿ, ಶಿವಮೊಗ್ಗ ಶಾಖೆ ಸರ್ವಿಸ್ ಮ್ಯಾನೇಜರ್ ಮೋಹನ್ ರಮೇಶ್, ಬಾಡಿಶಾಪ್ ಮ್ಯಾನೇಜರ್ ಅರುಣ್, ಹಾಗೂ ಮಾರ್ಕೆಟಿಂಗ್ ವಿಭಾಗದ ಶ್ರೀನಿವಾಸ್ ಮತ್ತು ರಂಜಿತ್ ಉಪಸ್ಥಿತರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *