<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಪುಟ್‌ಪಾತ್ ಅತಿಕ್ರಮಣ ತೆರವು

Banner Ad
ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಪುಟ್‌ಪಾತ್ ಅತಿಕ್ರಮಣ ತೆರವು

ಶಿವಮೊಗ್ಗ :- ನಗರದ ಶಂಕರಮಠ ರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಚಾರದಟ್ಟಣೆ ಇದ್ದು, ಸ್ಥಳೀಯ ವರ್ತಕರು ರಸ್ತೆಯ ಇಕ್ಕೆಲಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಮಾಡಿ ಅಡ್ಡಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಚಾರಿ ಪೊಲೀಸರು ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಶಂಕರಮಠ ರಸ್ತೆಯ ಎರಡೂ ಭಾಗದಲ್ಲಿ ಹಲವಾರು ದ್ವಿಚಕ್ರ ಮತ್ತು ೪ಚಕ್ರ ವಾಹನಗಳ ಶೋರೂಂಗಳು ಮತ್ತು ಗ್ಯಾರೇಜ್ ಗಳಿದ್ದು, ಹಲವು ಬಾರಿ ನೋಟಿಸ್ ನೀಡಿದರೂ ವರ್ತಕರು ರಸ್ತೆಯಲ್ಲೇ ತಮ್ಮ ವಾಹನಗಳನ್ನ ನಿಲ್ಲಿಸುವುದರ ಜೊತೆಗೆ ಫುಟ್‌ಪಾತ್ ಅನ್ನೂ ಕೂಡ ಅತಿಕ್ರಮಣ ಮಾಡಿದ್ದರು.

ಹೊಸ ಕಟ್ಟಡಗಳು ಕೂಡ ನಿರ್ಮಾಣ ಮಾಡಿದ್ದು, ಕಟ್ಟಡದ ಮಾಲೀಕರು ಬಹುಮಹಡಿ ಕಟ್ಟಡ ಕಟ್ಟಿದ್ದರೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಅತಿಕ್ರಮಣ ಮಾಡಿದ್ದು, ಇಂದು ಸಂಚಾರಿ ಪೊಲೀಸರು ಅವರಿಗೆ ತಿಳಿವಳಿಕೆ ನೀಡಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಹಾಗೂ ಸಾರ್ವಜನಿಕರಿಗೂ ವಿನಂತಿ ಮಾಡಿದ್ದು, ಸಂಚಾರ ನಿಯಮಗಳನ್ನು ಪಾಲಿಸಬೇಕು. ಫುಟ್‌ಪಾತ್ ನಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಸಂಚಾರ ಪೂರ್ವ ಮತ್ತು ಪಶ್ಚಿಮ ಠಾಣೆಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *